ಶಹಾಪುರ: ತಾಲೂಕಿನ ಹಾಲಭಾವಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಕಲಾ ಪ್ರಭುಗೌಡ ಗೂಗಲ್ ಅವರಿಗೆ ದಕ್ಷಿಣ ಭಾರತದ ‘ಸಾವಿತ್ರಿ ಬಾಯಿ ಪುಲೆ’ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದು ಕರ್ನಾಟಕ ರಾಜ್ಯ ಮಹಿಳೆಯರ ನೌಕರರ ಸಂಘದ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಜ.3 ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾವಿತ್ರಿ ಭಾಯಿ ಪುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಸ್ವೀಕರಿಸಿದರು. ಶ್ರೀಮತಿ ಚಂದ್ರಕಲಾ ಗೂಗಲ್ ಅವರು ಉತ್ತಮ ಶಿಕ್ಷಕಿಯಾಗಿ ಇತರೆ ಸರ್ಕಾರಿ ಶಿಕ್ಷಕಿಯರಿಗೆ ಮಾದರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯ ಇತರ ಶಿಕ್ಷಕರೊಂದಿಗೆ ಸೇರಿ ಹಲವು ಬದಲಾವಣೆಗಳನ್ನು ತಂದಿದ್ದಾರೆ. ಸದ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, 1999ರಲ್ಲಿ ಕರ್ತವ್ಯಕ್ಕೆ ಸೇರಿದ್ದು ,ಸುಮಾರು 27 ವರ್ಷಗಳಿಂದ ಸಹ ಶಿಕ್ಷಕಿಯಾಗಿ ಗುಣಮಟ್ಟದ ಭೋದನೆ, ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾರ್ವಜನಿಕ ವಲಯದಲ್ಲಿ ಸಾಮಾಜಿಕ ಸೇವೆ, ಉತ್ತಮ ಕಡತ ನಿರ್ವಹಣೆ, ಪೋಷಕರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ ಅವರ ಹೆಸರಿನಲ್ಲಿ ನೀಡುತ್ತಿರುವ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತುಂಬಾ ಸಂತೋಷವಾಗಿದೆ ಎಂದು ಶ್ರೀಮತಿ ಚಂದ್ರಕಲಾ ಗೂಗಲ್ ಅವರು ಸಂತಸ ಹಂಚಿಕೊಂಡಿದ್ದಾರೆ.
ನಲಿಕಲಿ ,ರಜುನಾ, ಓದುವೆ ನಾನು ಎನ್ನುವ ಹತ್ತಾರು ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ್ದಾರೆ. ಜಿಲ್ಲಾ ಹಂತದಲ್ಲಿ ವಿದ್ಯಾಗಮ, ಕಲಿಕಾ ಚೇತರಿಕೆ, ಬೆಳ್ಳಿ ಮೋಡ, ಇಂಗ್ಲಿಷನ ನಲಿಕಲಿ ಈಗೇ ವಿಭಾಗವಾರು ಹಂತ, ರಾಜ್ಯ ಹಂತದಲ್ಲಿ ಗುರುಚೇತನ ಈಗೇ ಅನೇಕ ವಿಷಯಗಳ ಕುರಿತು ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಕಲಿಕಾ ಚಟುವಟಿಕೆಗಳ ಮೂಲಕ ಅವರ ವಿದ್ಯಾಭ್ಯಾಸಕ್ಕಾಗಿ ಹಲವು ವಿಶೇಷ ಕಾರ್ಯಕ್ರಮ ಮಾಡಿ ಅಕ್ಷರಾ ಜ್ಞಾನ ನೀಡುತ್ತಿದ್ದಾರೆ.
ಈಗಾಗಲೇ ಮುಖ್ಯಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಚಂದ್ರಕಲಾ ಗೂಗಲ್ ಅವರಿಗೆ ಸರ್ಕಾರದಿಂದ (೨೦೧೩-೧೪) ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ , ೨೦೧೮-೧೯ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ನಲಿಕಲಿ ಹಾಗೂ ಶಿಕ್ಷಕಿ, ೨೦೨೨-೨೩ರಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗಳು ಹಾಗೂ ಇದರ ಜೊತೆಗೆ ವಿವಿಧ ಸರಕಾರೇತರ ಪ್ರಶಸ್ತಿಗಳು ಸಹ ಲಭಿಸಿವೆ.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಹಿಳಾ ಪ್ರತಿನಿಧಿಯಾಗಿ, ಜಿಲ್ಲಾ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯ ಸಂಘದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ಶಹಾಪುರ ತಾಲೂಕ ಮಹಿಳಾ ಜಾನಪದ ಪರಿಷತ್ತಿನಲ್ಲಿ ಅಧ್ಯಕ್ಷೆ, ಪತಂಜಲಿ ಯೋಗ ಸಮಿತಿ ಶಹಾಪುರದಲ್ಲಿ ಮಹಿಳಾ ಪ್ರತಿನಿಧಿಯಾಗಿ, ಸ್ಕೌಡ್ ಮತ್ತು ಗೈಡ್ಸ್ ವಿಭಾಗದಲ್ಲಿ ಲೀಡರ್ ಆಗಿ ರಾಜ್ಯ ಮತ್ತು ರಾಷ್ಟçಮಟ್ಟದ ಉತ್ಸವಗಳಲ್ಲಿ ಮಕ್ಕಳೊಂದಿಗೆ ಭಾಗಿ, ಜಿಲ್ಲಾ ವಿಭಾಗ ರಾಷ್ರö್ಟಮಟ್ಟದ ಯೋಗಸ್ಪರ್ಧೆಯಲ್ಲಿ ಭಾಗಿ ಈಗೇ ಅನೇಕ ಜವಾಬ್ದಾರಿಗಳನ್ನು ಹೊತ್ತುಕೊಂಡು ಮುನ್ನಡೆಯುತ್ತಿರುವ ಇವರು ಇದೀಗ ಉತ್ತಮ ಶಿಕ್ಷಕಿಯ ಪಟ್ಟ ಪಡೆದಿದ್ದಾರೆ.
ಲೇಖನಗಳು; ವಿಶ್ವಚೇತನ ವಿಶ್ವಾರಾಧ್ಯರು (ಶ್ರೀ ಷ.ಬ್ರ.ಡಾ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ಪಂಚ ಷಷ್ಪಬ್ದಿ ಅಭಿನಂದನ ಗ್ರಂಥ (೨೦೧೬) ಸಗರನಾಡಿನಲ್ಲಿ ಆಧ್ಯಾತ್ಮ ಚೇತನ, ಮಂದಾಕಿನಿ , ಶಹಾಪುರ ತಾಲೂಕ ದ್ವಿತಿಯ ಸಾಹಿತ್ಯ ಸಮ್ಮೇಳನ (೨೦೧೭), ಸ್ಮರಣ ಸಂಚಿಕೆಯಲ್ಲಿ ಗಾದೆಗಳು ನಮ್ಮ ಬದುಕಿನ ಜೀವಾಶಗಳು, ಬೋರಗಿ ಪುರದಾಳದ ಮಹಾಲಿಂಗರು ಈಗೇ ಅನೇಕ ಲೇಖನಗಳನ್ನು ಸಹ ಬರೆದಿದ್ದಾರೆ.
ಓರ್ವ ಉತ್ತಮ ಶಿಕ್ಷಕಿಯ ಜೊತೆಗೆ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ವಿದ್ಯಾರ್ಥಿಗಳ ವಿಕಸನ ಜೊತೆಗೆ ಶಾಲೆಯ ವಾತಾವರಣವನ್ನು ಬದಲಾವಣೆ ಮಾಡಬಹುದು ಎನ್ನುವುದಕ್ಕೆ ಶಿಕ್ಷಕಿ ಶ್ರೀಮತಿ ಚಂದ್ರಕಲಾ ಗೂಗಲ್ ಅವರು ಸಾಬೀತುಪಡಿಸಿದ್ದಾರೆ.
