ಮೈಸೂರು: ಹಿಂದಿನ ಕಾಲದಲ್ಲಿ ಕಳ್ಳರು, ದರೋಡೆಕೋರರು ರಾತ್ರಿಯಾದರೆ ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹಾಡು ಹಗಲೇ ಕಳ್ಳತನ, ದರೋಡೆ ಮಾಡುತ್ತಿರುವುದು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ.
ಹೌದು, ಮೈಸೂರು ನಗರದಲ್ಲಿ ಹಾಡಗಲೇ ಕೆ.ಜಿ ಗಟ್ಟಲೆ ದರೋಡೆಕೋರರು ಚಿನ್ನ ಕಳ್ಳತನ ಮಾಡಿ ಎಸ್ಕೇಪ್ ಆಗಿರುವ ಘಟನೆ ಬೆಳಕಿಗೆ ಬಂದಿದೆ. (ಭಾನುವಾರ ಡಿ. 28) ಮಧ್ಯಾನ 2 ಗಂಟೆಗೆ ಚಿನ್ನದ ಅಂಗಡಿಗೆ ನುಗ್ಗಿದ ದರೋಡೆಕೋರರು ಅಂಗಡಿಯೊಳಗೆ ನುಗ್ಗಿ ಏಳು ಗನ್ನು ತೋರಿಸಿ ಕೇವಲ 4 ನಿಮಿಷದಲ್ಲಿ ಕೆ.ಜಿ ಗಟ್ಟಲೆ ಚಿನ್ನ ರೋಡೆ ಮಾಡಿರುವ ಘಟನೆ ನಡೆದಿದೆ.
ಹುಣಸೂರು ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ʼ ಚಿನ್ನಂಗಡಿಗೆ ನುಗ್ಗಿದ್ದಾರೆ. ಚಿನ್ನ ತೆಗೆದುಕೊಂಡು ಹೋಗಲು ಮೊದಲೇ 2 ಚೀಲವನ್ನು ತಂದಿದ್ದರು.
ಅಂಗಡಿಗೆ 5 ಜನ ನುಗ್ಗಿದ್ದರೆ ಚಿನ್ನವನ್ನು ಒಬ್ಬ ಮಾತ್ರ ಗುಡ್ಡೆ ಹಾಕಿದ್ದ. ಮತ್ತೊಬ್ಬ ಗನ್ ಹಿಡಿದು ಸಿಬ್ಬಂದಿಯನ್ನು ಬೆದರಿಸುತ್ತಿದ್ದರೆ ಇನ್ನೊಬ್ಬ ಗನ್ ಹಿಡಿದು ಬಾಗಿಲ ಬಳಿ ನಿಂತಿದ್ದ. ಉಳಿದ ಇಬ್ಬರು ಹೊರಗಡೆ ದ್ವಿಚಕ್ರ ವಾಹನ ಸ್ಟಾರ್ಟ್ ಮಾಡಿಕೊಂಡು ನಿಂತಿದ್ದರು. ಇದನ್ನೂ ಓದಿ: ಗಣಿ ಧಣಿಗೆ ಮತ್ತೆ ಎದುರಾಯಿತು ಸಂಕಷ್ಟ!
ಒಬ್ಬಾತ ಎಲ್ಲವನ್ನೂ ಗುಡ್ಡೆ ಹಾಕಿ ಬ್ಯಾಗಿಗೆ ತುಂಬಿ ಕೇವಲ ನಾಲ್ಕೇ ನಿಮಿಷದಲ್ಲಿ ಕೆಜಿ ಚಿನ್ನವನ್ನು ಹೊತ್ತುಕೊಂಡು ಹೋಗಿದ್ದಾರೆ. ಅಂದಾಜು 4ರಿಂದ 5 ಕೋಟಿ ಮೌಲ್ಯದಷ್ಟು ಚಿನ್ನ-ವಜ್ರಾಭರಣ ದರೋಡೆಯಾಗಿದೆ.
ಇನ್ನು ದರೋಡೆಕೋರರ ಚಿನ್ನ ಕದ್ದು ರಸ್ತೆಯಲ್ಲಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಬೈಕ್ ನಲ್ಲಿ ಇಬ್ಬರು, ಮತ್ತೊಂದು ಬೈಕ್‌ನಲ್ಲಿ ಮೂವರು ಹುಣಸೂರಿನಿಂದ ಕೆ.ಆರ್ ನಗರಕ್ಕೆ ಬೈಪಾಸ್ ರಸ್ತೆಯ ಮೂಲಕ ಹೋಗುತ್ತಿರುವ ವಿಡಿಯೋ ಸೆರೆಯಾಗಿದೆ.
