ರಾಮನಗರದ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ವಿಕ್ಷಣೆಗೆ ಬಂದಿದ್ದ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣರವರ ಸಮ್ಮುಖದಲ್ಲೆ, ರಾಮನಗರದ ಶಾಸಕ ಇಕ್ಬಾಲ್ ಹುಸೇನ್’ಗೆ ಇಂದು (ಶನಿವಾರ ಡಿಸೆಂಬರ್ 27) ನಗರಸಭಾ ಅಧ್ಯಕ್ಷ ಶಶಿ(ಕೆ.ಶೇಷಾದ್ರಿ) ಹಿಗ್ಗಾಮಗ್ಗ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ರೈಲ್ವೆ ನಿಲ್ದಾಣದ ಸಮೀಪದಲ್ಲಿನ ಟ್ರೂಫ್’ಲೈನ್ ರಸ್ತೆಯ ರೈಲ್ವೆ ಅಂಡರ್ ಪಾಸ್ ಕಾಮಗಾರಿ ನಡೆಯಬೇಕಾಗಿರುವ ಸ್ಥಳಕ್ಕೆ ವಿ.ಸೋಮಣ್ಣರವರು ಬಂದಾಗ, ಟ್ರೂಪ್’ಲೈನ್ ನಗರಸಭಾ ಸದಸ್ಯರಾದ ಗ್ಯಾಬ್ರಿಯಲ್ ಸೋಮಣ್ಣರವರಿಗೆ ಸ್ಥಳಿಯರ ಸಮಸ್ಯೆಗಳನ್ನ ವಿವರಿಸುತ್ತಿದ್ದರು, ಈ ಸಂದರ್ಭ ಮದ್ಯೆ ಪ್ರವೇಶಿಸಿದ ಶಾಸಕ ಇಕ್ಬಾಲ್ ಹುಸೇನ್ ಗ್ಯಾಬ್ರಿಯಲ್’ರವರಿಗೆ ಸುಮ್ಮನೆ ನಿಂತು ಕೊಳ್ಳುವಂತೆ ಗದರಿದ್ದಾರೆ.
ಆ ಸಂದರ್ಭದಲ್ಲಿ ಸ್ಥಳಿಯರ ಪರ ನಿಂತ ಶಶಿ ಅಣ್ಣರವರು, ಸ್ಥಳಿಯರು ಸಮಸ್ಯೆ ಹೇಳಲಿ ಬಿಡಿ ಎಂದು ಶಾಸಕರಿಗೆ ಹೇಳಿದ್ದಾರೆ. ಇಷ್ಟಕ್ಕೆ ಕೆರಳಿದ ಶಾಸಕರು ಅವನ್ಯಾರು ಮಾತನಾಡಲು ಎಂದು ಶಶಿರವರಿಗೆ ಹೇಳಿದ್ದಾರೆ. ಆಗ ತಾಳ್ಮೆ ಕಳೆದುಕೊಂಡ ನಗರಸಭಾ ಅಧ್ಯಕ್ಷ ಶಶಿ ಅಣ್ಣ ಸ್ಥಳಿಯ ಮುಖಂಡರಲ್ಲದೆ ಇನ್ಯಾರಿ ಮಾತಾಡ್ತಾರೆ ಎಂದು ಶಾಸಕ ಇಕ್ಬಾಲ್ ಹುಸೇನ್’ರವರಿಗೆ ಹಿಗ್ಗಾಮಗ್ಗ ತರಾಟೆಗೆ ತೆಗೆದುಕೊಂಡರು. ಇದರಿಂದ ತೆಪ್ಪಗಾದ ಶಾಸಕ ಇಕ್ಬಾಲ್ ಹುಸೇನ್’ರವರು ಮುಜುಗರಕ್ಕಿಡಾಗಿ ತೆಪ್ಪಗೆ ಅಲ್ಲಿಂದ ತೆರಳಿದ್ದಾರೆ.
ಸ್ಥಳಿಯರ ಪರ ನಿಂತ ಶಶಿ ಅಣ್ಣರವರಿಗೆ ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
