ಶ್ರೀಹರಿಕೋಟಾ: ಇಸ್ರೋ ಕಂಪನಿ ಈಗಾಗಲೇ ಹಲವಾರು ಮಹತ್ವದ ಕಾರ್ಯಗಳನ್ನು ಕೈಕೊಂಡು ವಿಶ್ವದಾದ್ಯಂತ ಹೆಸರು ಗಳಿಸುತ್ತಿರುವ ಇಸ್ರೋ ಮತ್ತೊಂದು ಮಹತ್ವದ ಹೆಜ್ಜೆಇಟ್ಟಿದೆ.
ಹೌದು, ಇಸ್ರೋ ಇಂದು (ಬುಧವಾರ ಡಿಸೆಂಬರ್ 24) ರಂದು ಬೆಳಗ್ಗೆ 8: 54ಕ್ಕೆ ಮಾರ್ಕ್ 3 ರಾಕೆಟ್ ಉಡಾವಣೆ ಮಾಡಿದೆ ಇದರಿಂದ ಇಸ್ರೋ ಕಂಪನಿಯಿಂದ ಮಹತ್ವದ ಕಾರ್ಯಕ್ಕೆ ನಡೆದಿದೆ.
ಇಸ್ರೋದ ಶಕ್ತಿಶಾಲಿ LVM3-M6 ರಾಕೆಟ್ ಮೂಲಕ ಅತ್ಯಂತ ಭಾರದ ವಾಣಿಜ್ಯ ಉಪಗ್ರಹ ಎಂಬ ಹೆಗ್ಗಳಿಕೆಯ ಅಮೆರಿಕದ AST ಸ್ಪೇಸ್ಮೊಬೈಲ್ ಕಂಪನಿಯ ಬ್ಲೂಬರ್ಡ್ ಬ್ಲಾಕ್ -2 ಸಂವಹನ ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ.
2025ರ ಸಾಲಿನಲ್ಲಿ ಇಸ್ರೋ ಕೈಗೊಂಡ ಅತ್ಯಂತ ಮಹತ್ವದ ವಾಣಿಜ್ಯ ಉಡಾವಣೆಗಳಲ್ಲಿ ಇದು ಸೇರ್ಪಡೆಯಾಗಿದೆ. 43.5 ಮೀ. ಎತ್ತರದ 640 ಟನ್ ತೂಕದ ಬಾಹುಬಲಿ ಆವೃತ್ತಿಯ ರಾಕೆಟ್, ಚಂದ್ರಯಾನ-2, ಚಂದ್ರಯಾನ-3 ಸೇರಿ ಇಸ್ರೋದ 8 ಯೋಜನೆಗಳನ್ನು ಇದುವರೆಗೂ ಯಶಸ್ವಿಗೊಳಿಸಿದೆ.
ಶ್ರೀಹರಿಕೋಟಾ ಉಡ್ಡಯನ ಕೇಂದ್ರದ 2ನೇ ಲಾಂಚ್ ಪ್ಯಾಡ್ನಿಂದ ಬೆಳಗ್ಗೆ 8:54ಕ್ಕೆ ಮಾರ್ಕ್ 3 ರಾಕೆಟ್ 6,500 ಕೆ.ಜಿ ತೂಕದ ಭಾರೀ ಉಪಗ್ರಹವನ್ನು ಹೊತ್ತುಕೊಂಡು ನಭಕ್ಕೆ ಚಿಮ್ಮಿತು. ಸುಮಾರು 15 ನಿಮಿಷಗಳ ಹಾರಾಟದ ನಂತರ ರಾಕೆಟ್ನಿಂದ ಬ್ಲೂಬರ್ಡ್ ಬ್ಲಾಕ್-2 ಬೇರ್ಪಟ್ಟು ಸುಮಾರು 520 ಕಿ.ಮೀ .ಎತ್ತರದಲ್ಲಿ ಅದರ ಉದ್ದೇಶಿತ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿತು. ಇದನ್ನೂ ಓದಿ: ಅಸಂಘಟಿತ ಕಾರ್ಮಿಕ ವರ್ಗದವರಿಗೂ ಇನ್ಮುಂದೆ ESIC ಆಸ್ಪತ್ರೆ ಸೇವೆ ಲಭ್ಯ: ಶೋಭಾ ಕರಂದ್ಲಾಜೆ
ಭಾರತದ ನೆಲದಿಂದ ಭಾರತದ ರಾಕೆಟ್ ಮೂಲಕ ಉಡಾವಣೆ ಮಾಡಲಾದ ಅತ್ಯಂತ ಭಾರವಾದ ಉಪಗ್ರಹ ಇದಾಗಿರುವುದು ವಿಶೇಷ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮತ್ತು ಅಮೆರಿಕ ಮೂಲದ AST ಸ್ಪೇಸ್ಮೊಬೈಲ್ ಮಧ್ಯೆ ನಡೆದ ವಾಣಿಜ್ಯ ಒಪ್ಪಂದದ ಭಾಗವಾಗಿ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. 43.5 ಮೀಟರ್ ಎತ್ತರ ಮತ್ತು 640 ಟನ್ ತೂಕವಿರುವ LVM3 ರಾಕೆಟ್ ಅನ್ನು ಬಾಹುಬಲಿ (Baahubali) ಎಂದು ಕರೆಯಲಾಗುತ್ತದೆ.
