ಕಲಬುರಗಿ: ಜೇವರ್ಗಿ ತಾಲೂಕಿನ ಚಾಮನೂರ ನರಿಬೋಳ ಸೇತುವೆ ಕಾಮಗಾರಿ ವಿಳಂಬಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಮತ್ತು ಗ್ರಾಮಗಸ್ತರ ಸಭೆಯಲ್ಲಿ ಕೆ ಕೆ ಆರ್ ಡಿ ಬಿ ಅದ್ಯಕ್ಷರಾದ ಅಧ್ಯಕ್ಷ, ಜೇವರ್ಗಿ ಶಾಸಕ ಅಜಯ್ ಸಿಂಗ್ ಅವರು ಅಧಿಕಾರಿಗಳಿಗೆ ಸೇತುವೆ ಉಳಿದ ಕಾಮಗಾರಿ ಕೂಡಲೇ ಪ್ರಾರಂಭಿಸಲು ಅಧಕಾರಿಗಳಿಗೆ ಸೂಚನೆ ನೀಡಿದರು.
ಈ ಬ್ರಿಜ್ ಕಾಮಗಾರಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದರಿಂದ ಜೇವರ್ಗಿ ಹಾಗೂ ಚಿತ್ತಾಪುರ ತಾಲೂಕಿನ ಜನರಿಗೆ ಸಾಕಷ್ಟು ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಈ ಕಾಮಗಾರಿ ನಿರ್ಹಿಸಿದ ಎಜೆನ್ಸಿಯ ಗುತ್ತಿಗೆ ರದ್ದುಪಡಿಸಲಾಗಿದೆ ಅವರ ಮೇಲೆ ಸುಮಾರು 6 ಕೋಟಿ ದಂಡ ವಿಧಿಸಲಾಗಿದೆ ವಿಳಂಬ ಮಾಡಿದ ಗುತ್ತಿಗೆದಾರರ ಮೇಲೆ ಕೇಸ ದಾಖಲಿಸಲು ನರಿಬೋಳ ಗ್ರಾಮದವರು ಮತ್ತು ಹೋರಾಟಗಾರರಾದ ಎಂ ಎಸ್ ಪಾಟೋಲ ನರಿಬೋಳ ಅವರು ಶಾಸಕರಿಗೆ ಒತ್ತಾಯಿಸಿದರು ಕಾಮಗಾರಿ ಮುಂದಿನ ಡಿಸೆಂಬರ್ ವರೆಗೂ ಉದ್ಘಾಟನೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
