ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ದೇಶ ಮಾತ್ರವಲ್ಲದೆ ವಿದೇಶಿ ಕಂಪನಿಗಳು ಕೂಡ ಬೆಂಗಳೂರು ನಗರದಲ್ಲಿ ತಲೆ ಎತ್ತಿ ನಡೆಯುತಿವೆ.
ಹೌದು, ಇತ್ತೀಚಿಗಷ್ಟೇ ಪ್ರಾರಂಭವಾದ ಐಫೋನ್ ಕಂಪನಿಯು 30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡು ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಳ್ಳಲು ದಾರಿದೀಪವಾಗಿದೆ ಎಂದರೆ ತಪ್ಪಾಗಲಾರದು.
ದೇವನಹಳ್ಳಿ ಸಮೀಪ ಫಾಕ್ಸ್ಕಾನ್ ಸಂಸ್ಥೆ ನಿರ್ಮಿಸಿರುವ ಐಫೋನ್ ಫ್ಯಾಕ್ಟರಿಯಲ್ಲಿ ಭಾರೀ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದೆ. ಕೇವಲ 8 ತಿಂಗಳಲ್ಲಿ ಇಲ್ಲಿಗೆ ಬರೋಬ್ಬರಿ 30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಯಾವುದೇ ಸಂಸ್ಥೆಯು, ಅಥವಾ ಯಾವುದೇ ಫ್ಯಾಕ್ಟರಿಯೂ ಇಷ್ಟು ವೇಗದಲ್ಲಿ ಇಷ್ಟು ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಂಡಿದ್ದೇ ಇಲ್ಲ.
ಇನ್ನು ಫಾಕ್ಸ್ಕಾನ್ ಕಂಪನಿ ನಿರ್ಮಿಸಿರುವ ವಿಶಾಲ ಫ್ಯಾಕ್ಟರಿಯಲ್ಲಿ ನೇಮಕವಾಗಿರವವರಲ್ಲಿ ಶೇ. 80ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. ಐಫೋನ್ ಫ್ಯಾಕ್ಟರಿಗೆ ನೇಮಕವಾಗಿರುವವರಲ್ಲಿ ಹೆಚ್ಚಿನವರು ಕೇವಲ 19-24 ವಯೋಮಾನದವರಾಗಿದ್ದು, ಬಹುತೇಕ ಎಲ್ಲರಿಗೂ ಇದೇ ಮೊದಲ ಕೆಲಸವಾಗಿದೆಯಂತೆ.
ಪಿಯುಸಿ, ಡಿಪ್ಲೊಮಾ ಮಾಡಿರುವ ಯುವತಿಯರನ್ನು ಕೆಲಸಕ್ಕೆ ಸೇರಿಸಿಕೊಂಡು, 6 ತಿಂಗಳ ಕಾಲ ತರಬೇತಿ ಕೊಟ್ಟು ಬಳಿಕ ಐಫೋನ್ ಪ್ರೊಡಕ್ಷನ್ ಯುನಿಟ್ಗಳಿಗೆ ಸೇರಿಸಿಕೊಳ್ಳಲಾಗುತ್ತಿದೆಯಂತೆ. ಇದನ್ನೂ ಓದಿ: ಎ ಖಾತಾ ವಿತರಣೆಗೆ ಮುಂದಾದ GBA
ಭಾರತದಲ್ಲಿ ಐಟಿ ವೃತ್ತಿಪರರಿಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ನೇಮಕಾತಿ ತೀವ್ರತರದಲ್ಲಿ ನಡೆಯುತ್ತಿದೆ. ಈ ವರ್ಷ (2025) 18 ಲಕ್ಷ ಐಟಿ ಹುದ್ದೆಗಳ ನೇಮಕಾತಿ ಆಗಿದೆ.
