Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮಕ್ಕಳ ಆಯೋಗದಿಂದ ವಸತಿ ನಿಲಯ ಸ್ಥೀತಿ-ಗತಿ ಪರಿಶೀಲನೆ
  • State
  • ಶಹಾಪುರ

ಮಕ್ಕಳ ಆಯೋಗದಿಂದ ವಸತಿ ನಿಲಯ ಸ್ಥೀತಿ-ಗತಿ ಪರಿಶೀಲನೆ

Praja Vahini December 20, 2025 1 minute read
WhatsApp Image 2025-12-20 at 17.09.49
Spread the love

ಶಹಾಪುರ: ನಗರದ ಹಳೆಪೇಠೆ ಬಡಾವಣೆಯಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಬೇಟಿ ನೀಡಿ ವಸತಿಯ ಸ್ಥೀತಿ ಗತಿ ಪರಿಶೀಲಿಸಿದರು.

ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ವಸತಿ ಶಾಲೆಯ, ವಸತಿ ನಿಲಯ, ಊಟದ ಮನೆ, ಶೌಚಾಲಯ, ಸ್ನಾನದ ಕೋಣೆ ವಾತಾವರಣ ಪರಿಶೀಲಿಸಿದರು. ವಾರದಲ್ಲಿ 1 ದಿನ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಬೇಕು. ಮತ್ತು ವಿದ್ಯಾರ್ಥಿಗಳು ಗೈರಾಗುವ ಮುನ್ನ ಸರಿಯಾದ ಮಾಹಿತಿ ಪಡೆದು ಕಳುಹಿಸಿಕೊಡಬೇಕು ಹಾಗೂ 15 ದಿನಗಳಲ್ಲಿ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ಧೇಶಕ ಚನ್ನಬಸ್ಸಪ್ಪನವರಿಗೆ ಖಡಕ್ ಆಗಿ ಸೂಚಿಸಿದರು. 247 ಮಕ್ಕಳ ದಾಖಲಾತಿಯಲ್ಲಿ 204 ಮಕ್ಕಳು ಮಾತ್ರ ಹಾಜರಾತಿ ಇದ್ದು, ಇನ್ನೂಳಿದ ಮಕ್ಕಳು ಗೈರಾಗಿರುವುದಕ್ಕೆ ಪ್ರಾಚಾರ್ಯರಿಂದ ಮಾಹಿತಿ ಪಡೆದರು.

ಶಾಲೆ ಬಿಟ್ಟ ಮಕ್ಕಳ ಕುರಿತು ಕ್ರಮ ಕೈಗೊಳ್ಳಲು ತಿಳಿಸಿದರು, ಒಟ್ಟು 26 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದಾಗಿ ಉಪ ನಿಧೇರ್ಶಕರಿಂದ ಮಾಹಿತಿ ಪಡೆದುಕೊಂಡು ಪಾಲಕರಿಂದ ಮಾಹಿತಿ ಪಡೆದು ವಾರದಲ್ಲಿ ವರಿದಿ ಸಲ್ಲಿಸುವಂತೆ ತಾಕೀತು ಮಾಡಿದರು. ಹಾಗೂ ನಗರದ ಪೊಲೀಸ್ ಠಾಣೆಗೂ ಬೇಟಿ ನೀಡಿ ಮಕ್ಕಳ ರಕ್ಷಣೆಗೆ ವಿಶೇಷ ಗಮನ ಕೊಡಿ ಮತ್ತು ಫೊಕ್ಸೊಗಳಂತಹ ಕಾಯ್ದೆಗಳ ಕುರಿತು ಮಕ್ಕಳಿಗೆ ಮಾಹಿತಿ ಒದಗಿಸುವ ಕೆಲಸ ಮಾಡಿ ಎಂದು ತಿಳಿಸಿದರು.

ಬಳಿಕ ತಾಲೂಕಿನ ಬೇವಿನಹಳ್ಳಿ ಕ್ರಾಸ್ ಹತ್ತಿರವಿರುವ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ರಾತ್ರಿ ವಾಸ್ತವ್ಯ ಹೂಡಿದರು. ಈ ವೇಳೆ ಪ್ರಾಚಾರ್ಯ ಶ್ರೀಶೈಲ ತಳವಾರ ಜತೆಗಿದ್ದರು.

ಪ್ರಚಾರಕ್ಕಾಗಿ ಹಾಸ್ಟೇಲ್ ವಾಸ್ತವ್ಯ ಬೇಡ

ವಸತಿ ನಿಲಯಗಳಲ್ಲಿನ ಮಕ್ಕಳ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಸಂಭಂಧ ಸರಕಾರದ ಗಮನ ಸೆಳೆಯಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗವು ಹಾಸ್ಟೆಲ್ ವಾಸ್ತವ್ಯ ಎಂಬ ವಿಶೇಷ ಅಭಿಯಾನ ಮಾಡುತ್ತಿದ್ದು ಇದು ಕೇವಲ ಪ್ರಚಾರಕ್ಕಷ್ಟೇ ಸಿಮೀತವಾದಂತಿದೆ ಎಂದು ಪ್ರಜ್ಞಾವಂತರು ದೂರಿದ್ದಾರೆ. ಎಲ್ಲಿಯೂ ಸಹ ಮುಕ್ತ ಸಮಲೋಚನೆ ಮಾಡದೇ ಸುಮ್ಮನೆ ಸರಕಾರದ ಹಣವನ್ನು ಅಧಿಕಾರಿಗಳು, ಆಯೋಗದವರು ವ್ಯರ್ಥ ಮಾಡುತ್ತಿದ್ದು, ಇದರಿಂದ ಕಾರ್ಯ ವೈಖರಿಯಲ್ಲಿ ಏನೂ ಬದಲಾಗದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.

ಅನಧೀಕೃತ ಶಾಲೆ, ಕೋಚಿಂಗ್ ಮುಚ್ಚವಲ್ಲಿ ಮೀನಾಮೇಷ

ಮಕ್ಕಳ ಆಯೋಗದ ಸದಸ್ಯರಾಗಿದ್ದ ಶಶಿಧರ ಕೋಸಂಬಿ ಅವರು ಪ್ರಸ್ತುತ ಆಯೋಗದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಅಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ನಗರಕ್ಕೆ ಬಂದಿದ್ದ ಅವರು ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುತ್ತಾರೆ ಎನ್ನುವ ನೀರಕ್ಷೆ ಹೊತ್ತಿದ್ದ ನಮಗೆ ಭಾರಿ ನಿರಾಸೆ ಆಗಿದೆ ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷ ಸಿದ್ದು ಪಟ್ಟೇದಾರ ಆರೋಪಿಸಿದ್ದಾರೆ.

ಆಯೋಗದ ಕಾಟಾಚಾರದ ಬೇಟಿಯಿಂದ ಸಮಸ್ಯೆ ಪರಿಹರಿಸಲ್ಲ

ಅನಧೀಕೃತ ಕೊಚಿಂಗ್ ಶಾಲೆ, ವಸತಿಗಳ ವಿರುದ್ಧ ಕಳೆದ 2 ವರ್ಷದಿಂದ ನಡೆದಿರುವ ನಮ್ಮ ಹೋರಾಟಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಬೆಂಬಲ ಸಿಗುತ್ತದೆ, ಸಮಸ್ಯೆ ಪರಿಹಾರ ಸಿಗುತ್ತದೆ ಎನ್ನುವ ಆಸೆಯಲ್ಲಿ ಇದ್ದ ನಮಗೆ ಶಶಿಧರ ಕೋಸಂಬೆ ಅವರು ಮುಗಿಗೆ ತುಪ್ಪ ಸವರುವ ಹಾಗೆ ತಟ್ಟನೆ ಬಂದು ಕ್ರಮ ಕೈಗೊಳ್ಳದೆ ಹೋಗಿದ್ದಾರೆ. ಅಧ್ಯಕ್ಷರು ಬೇಟಿ ನೀಡಿದ ವಸತಿ ಶಾಲೆಯ ಪಕ್ಕದಲ್ಲೇ ಅನಧೀಕೃತ ಶಾಲೆ ಇದ್ದು, ಅದರ ಕುರಿತು ಅವರ ಗಮನಕ್ಕೆ ತಂದರೂ ಸಹ ಹಾಗೇ ಹೋಗಿರುವುದು ನೋಡಿದರೆ, ಇಲ್ಲಿನ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಆಯೋಗದ ನಡುವೆ ಒಳ ಒಪ್ಪಂದವಾಗಿರಬಹುದೇ ಎನ್ನುವ ಅನುಮಾನ ಮೂಡುತ್ತಿದೆ ಎಂದು ನಮ್ಮ ಕರ್ನಾಟಕ ಸೇನೆ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಹೇಳಿದರು

ಈ ಸಂದರ್ಭದಲ್ಲಿ ಸಿದ್ದಣ್ಣ ಅಣಬಿ, ಹಣಮಂತ್ರಾಯ ಸೊಮಾಪುರಿ, ಹಿಂದುಳಿದ ವರ್ಗದ ಅಧಿಕಾರಿ ಚೆನ್ನಪ್ಪಗೌಡ ಚೌಧ್ರಿ, ಸಿಡಿಪಿಓ ಮಲ್ಲಣ್ಣ ದೇಸಾಯಿ ಸೇರಿದಂತೆ ಅಧಿಕಾರಿಗಳು ಇದ್ದರು.

 

About the Author

Praja Vahini

Editor

View All Posts

Spread the love

Post navigation

Previous: ಮಣ್ಣಿನ ಆರೋಗ್ಯ, ನೀರಿನ ಸಮಗ್ರ ನಿರ್ವಹಣೆ ಯೋಜನೆಗೆ ಸಿಎಂ ಚಾಲನೆ
Next: ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್!

Views:

244

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.