Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ರಾಜ್ಯದ ಯಾವುದೇ ಕಡೆಗಳಲ್ಲಿ ಗಾಂಜಾ ಮಿಶ್ರಿತ ಮಾವಾ ಗುಟಕಾ ಮಾರಾಟ ಕಂಡುಬಂದಿಲ್ಲ
  • Front news
  • Politics
  • State
  • ಬೆಳಗಾವಿ

ರಾಜ್ಯದ ಯಾವುದೇ ಕಡೆಗಳಲ್ಲಿ ಗಾಂಜಾ ಮಿಶ್ರಿತ ಮಾವಾ ಗುಟಕಾ ಮಾರಾಟ ಕಂಡುಬಂದಿಲ್ಲ

Praja Vahini December 18, 2025 1 minute read
188355c5-4f52-4d5c-a70d-a288a531005b
Spread the love

ಬೆಳಗಾವಿ: ಉತ್ತರ ಕರ್ನಾಟಕದ ವಿಜಯಪುರ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಗಾಂಜಾ ಮಿಶ್ರಿತ ಮಾವಾ ಸ್ಥಳಿಯ ಗುಟಕಾ ಮಾರಾಟ ಕಂಡುಬಂದಿರುವುದಿಲ್ಲ ಮತ್ತು ಈ ಸಂಬಂಧ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿರುವುದಿಲ್ಲ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಡಿ.18ರಂದು ಮೇಲ್ಮನೆಯಲ್ಲಿ ಸ್ಪಷ್ಟನೆ ನೀಡಿದರು.

ಪ್ರಶ್ನೋತ್ತರ ವೇಳೆ, ಸದಸ್ಯರಾದ ಕೇಶವ ಪ್ರಸಾದ್ ಎಸ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮಾದಕ ವಸ್ತುಗಳ ಹಾವಳಿಯ ಪ್ರಕರಣಗಳನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, 2023ರಲ್ಲಿ 133.58 ಕೋಟಿ ರೂ ಮೌಲ್ಯದ 10,626 ಕೆ ಜಿ ಗಾಂಜಾ ಮತ್ತು ಇನ್ನೀತರ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ. 2024ರಲ್ಲಿ 164.91 ಕೋಟಿ ರೂ. ಮೌಲ್ಯದ 6609 ಕೆ.ಜಿ. ಗಾಂಜಾ ಮತ್ತು ಇತರೆ ಮಾದಕ ಪದಾರ್ಥ ವಶಕ್ಕೆ ಪಡೆಯಲಾಗಿದೆ. 2025ರಲ್ಲಿ 185.72 ಲಕ್ಷ ರೂ ಮೌಲ್ಯದ 5079 ಕೆ.ಜಿ. ಗಾಂಜಾ ಮತ್ತು ಇನ್ನೀತರ ಮಾದಕ ಪದಾರ್ಥ ವಶಕ್ಕೆ ಪಡೆಯಲಾಗಿದೆ.

ಮಾದಕ ವಸ್ತು ಮಾರಾಟ ಉತ್ಪಾದನೆ ಬಗ್ಗೆ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ-1985ರಡಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ಘಟಕಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿರುತ್ತದೆ.

ಮಾದಕ ವಸ್ತುಗಳ ಹಾವಳಿಗಳನ್ನು ತಡೆಗಟ್ಟಲು ಎನ್‍ಡಿಪಿಎಸ್ ಕಾಯ್ದೆ-1985 ರಡಿಯಲ್ಲಿ 2023ರಲ್ಲಿ 6768, 2024ರಲ್ಲಿ 4168 ಮತ್ತು 2025ರಲ್ಲಿ 5930 ಪ್ರಕರಣಗಳನ್ನು ದಾಖಲಿಸಲಾಗಿದೆ.

ಮಾದಕ ವಸ್ತು ಸಾಗಾಟಕ್ಕೆ ಬಳಸಲಾಗುತ್ತಿರುವ ಖಾಸಗಿ ಕಾರುಗಳು, ಬೈಕ್‍ಗಳು ಹಾಗೂ ಇತರೆ ವಾಹನಗಳ ವಿರುದ್ಧ ಸಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಜೊತೆಗೆ ವಾಹನಗಳನ್ನು ಜಪ್ತಿ ಮಾಡಿ ಅಮಾನತ್ತುಪಡಿಸಿ ಠಾಣಾ ಪಿಎಫ್‍ನಲ್ಲಿ ನಮೂದು ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಗೃಹ ಸಚಿವರು ಸದನಕ್ಕೆ ಮಾಹಿತಿ ನೀಡಿದರು.

About the Author

Praja Vahini

Editor

View All Posts

Spread the love

Post navigation

Previous: ರಾಜ್ಯದಲ್ಲಿ 7300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ: ಕೆ.ಜೆ.ಜಾರ್ಜ್
Next: ರಾಸಾಯನಿಕ ವಿಶ್ಲೇಷಣಾ ವರದಿ ನಂತರವೇ ಬಿಯರ್ ಮಾರಾಟಕ್ಕೆ ಬಿಡುಗಡೆ: ತಿಮ್ಮಾಪುರ

Views:

29

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.