Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸನ್ ಡಾನ್ಸ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾದ ಹೆಮ್ಮೆಯ ಕನ್ನಡತಿ ಅನುಯಾ ಸ್ವಾಮಿ
  • Bangalore
  • Cinema
  • State

ಸನ್ ಡಾನ್ಸ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾದ ಹೆಮ್ಮೆಯ ಕನ್ನಡತಿ ಅನುಯಾ ಸ್ವಾಮಿ

Praja Vahini December 17, 2025 1 minute read
WhatsApp Image 2025-12-17 at 07.29.15
Spread the love

ಬೆಂಗಳೂರು: ಕನ್ನಡ ಚಿತ್ರರಂಗ ಮತ್ತು ಸಮಗ್ರ ದಕ್ಷಿಣ ಏಷ್ಯಾದ ಸಿನಿಮಾಕ್ಕೆ ಇದು ಅತ್ಯಂತ ಹೆಮ್ಮೆಯ ಮತ್ತು ಐತಿಹಾಸಿಕ ಕ್ಷಣ. ಬೆಂಗಳೂರಿನ ಹೆಮ್ಮೆಯ ಪ್ರತಿಭೆ, ಚಲನಚಿತ್ರ ನಿರ್ದೇಶಕಿ ಅನೂಯಾ ಸ್ವಾಮಿ ಅವರ ‘ಪಂಕಜ’ ಕಿರುಚಿತ್ರವು ವಿಶ್ವದ ಅತ್ಯಂತ ಪ್ರಭಾವಶಾಲಿ ಚಲನಚಿತ್ರೋತ್ಸವಗಳಲ್ಲಿ ಒಂದಾದ ಸನ್ ಡಾನ್ಸ್ ಚಲನಚಿತ್ರೋತ್ಸವ 2026 ಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ.

ಈ ಆಯ್ಕೆಯು ಅನೇಕ ದೃಷ್ಟಿಕೋನಗಳಿಂದ ಮಹತ್ವದ್ದಾಗಿದೆ. ಸನ್ ಡಾನ್ಸ್ ಚಲನಚಿತ್ರೋತ್ಸವದಲ್ಲಿ ತಮ್ಮ ಚೊಚ್ಚಲ ಚಿತ್ರ ಪ್ರದರ್ಶನ ಮಾಡುತ್ತಿರುವ ಮೊದಲ ಕನ್ನಡತಿ ಅನೂಯಾ ಸ್ವಾಮಿಯವರು ನಿರ್ದೇಶಕಿಯಾಗಿ ಕನ್ನಡ ನಾಡಿಗೆ ಹೆಮ್ಮೆ ತಂದಿದ್ದಾರೆ.

ಸನ್ ಡಾನ್ಸ್ ಗೆ ಅಧಿಕೃತವಾಗಿ ಆಯ್ಕೆಯಾದ ಮೊದಲ ಕನ್ನಡ ಕಿರುಚಿತ್ರ ಎಂಬ ಹೆಗ್ಗಳಿಕೆ ‘ಪಂಕಜ’ ಕಿರು ಚಿತ್ರಕ್ಕಿದೆ. ಇದು ಪ್ರಾದೇಶಿಕ ಭಾರತೀಯ ಸಿನಿಮಾಗೆ ಜಾಗತಿಕ ವೇದಿಕೆಯಲ್ಲಿ ಸಿಕ್ಕಿರುವ ದೊಡ್ಡ ಮನ್ನಣೆಯಾಗಿದೆ.  ಸನ್ ಡಾನ್ಸ್ ಚಲನಚಿತ್ರೋತ್ಸವವು ಸನ್ ಡಾನ್ಸ್ ಸಂಸ್ಥೆಯು ಆಯೋಜಿಸುವ ವಾರ್ಷಿಕ ಚಲನಚಿತ್ರೋತ್ಸವವಾಗಿದೆ. ಇದು ಯುನೈಟೆಡ್ ಸ್ಟೇಟ್ಸ್ ನಲ್ಲಿಯೇ ಅತಿ ದೊಡ್ಡ ಸ್ವತಂತ್ರ ಚಲನಚಿತ್ರೋತ್ಸವವಾಗಿದೆ.

ವಿಶ್ವಸಿನಿಮಾ ಶಾಲೆಯಲ್ಲಿ ಅನೂಯಾ ಸ್ವಾಮಿ

ಪ್ರಸ್ತುತ ಅನೂಯಾ ಸ್ವಾಮಿ ಅವರು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಟಿಶ್ ಸ್ಕೂಲ್ ಆಫ್ ದಿ ಆರ್ಟ್ಸ್ (NYU Tisch School of the Arts) ನಲ್ಲಿ ಫಿಲ್ಮ್ ಮತ್ತು ಟಿವಿ ನಿರ್ಮಾಣದಲ್ಲಿ ಎಂ.ಎಫ್.ಎ  ಪದವಿ ಓದುತ್ತಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅನೂಯಾರವರು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದಾರೆ. ಮತ್ತೊಂದು ಗಮನಾರ್ಹವಾದ ಸಂಗತಿ ಎಂದರೆ ಆಸ್ಕರ್ ಪ್ರಶಸ್ತಿ ವಿಜೇತ ಪ್ರಖ್ಯಾತ ನಿರ್ದೇಶಕ ಸ್ಪೈಕ್ ಲೀ ಅವರ ಬಳಿ ಬೋಧನಾ ಸಹಾಯಕಿಯಾಗಿ ಕಾರ್ಯನಿರ್ವಹಿಸಿದ ಕೆಲವೇ ಕೆಲವು ಪ್ರತಿಭಾವಂತರಲ್ಲಿ ಇವರೂ ಒಬ್ಬರು. ಅಷ್ಟೇ ಅಲ್ಲದೆ, ಸನ್ಡಾನ್ಸ್ಗೆ ಚಿತ್ರ ಆಯ್ಕೆಯಾದ NYU ಟಿಶ್ ಸ್ಕೂಲ್ನಿಂದ ಬಂದ ಮೊದಲ ಭಾರತೀಯ ವಿದ್ಯಾರ್ಥಿ ಕೂಡ ಅನೂಯಾ ಸ್ವಾಮಿ ಅವರೇ ಆಗಿದ್ದಾರೆ.

ಬಹುಮಾನ ಮತ್ತು ಫೆಲೋಶಿಪ್ಗಳ ಸಾಧಕಿ

ಅನೂಯಾ ಸ್ವಾಮಿ ಅವರ ಪ್ರತಿಭೆ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅವರು ಪ್ರತಿಷ್ಠಿತ ಬಾಫ್ಟಾ ಸ್ಕಾಲರ್ಶಿಪ್, ಆಂಗ್ ಲೀ ಸ್ಕಾಲರ್ಶಿಪ್, ಮೌರಿಸ್ ಕನ್ಬಾರ್ ಸ್ಕಾಲರ್ಶಿಪ್, ಮ್ಯಾಥ್ಯೂ ಮೆಟ್ಸ್ ಮೆಮೋರಿಯಲ್ ಸ್ಕಾಲರ್ಶಿಪ್ ಮತ್ತು ಸನ್ಡಾನ್ಸ್ ಇನ್ಸ್ಟಿಟ್ಯೂಟ್ ಇಗ್ನೈಟ್ x ಅಡೋಬ್ ಫೆಲೋಶಿಪ್ ಸೇರಿದಂತೆ ಹಲವು ಗೌರವ ಮತ್ತು ವಿದ್ಯಾರ್ಥಿವೇತನಗಳನ್ನು ಪಡೆದಿದ್ದಾರೆ. ಅವರ ಕಾರ್ಯಕ್ಕೆ ”HEARUS ಪ್ರಶಸ್ತಿ’ ಮತ್ತು ‘ಸಾರಾ ಡ್ರೈವರ್ ಪ್ರೊಡಕ್ಷನ್ ಪ್ರಶಸ್ತಿ’ ಸಹ ಲಭಿಸಿವೆ.

ಪಂಕಜದ ಕಥಾಹಂದರ

ಅನೂಯಾ ಅವರ ಸಿನಿಮಾದ ವಿಭಿನ್ನ ಶೈಲಿ ಎಂದರೆ, ಅದು ಕಪ್ಪು ಹಾಸ್ಯ (Dark Humour), ಸಾಮಾಜಿಕ ವಿಮರ್ಶೆ ಮತ್ತು ಔಪಚಾರಿಕ ನಿಯಂತ್ರಣವನ್ನು ಒಗ್ಗೂಡಿಸುತ್ತದೆ.

ಪಂಕಜ ಚಿತ್ರವು ಆಘಾತ (Trauma), ದುಃಖ (Grief) ಮತ್ತು ನೈತಿಕ ಅಸ್ಪಷ್ಟತೆ (Moral Ambiguity) ಯಂತಹ ಸಂಕೀರ್ಣ ಭಾವನೆಗಳನ್ನು ಮಾನವೀಯ ನೆಲೆಯಲ್ಲಿ ಪರಿಶೋಧಿಸುತ್ತದೆ. ಮಹಿಳೆಯರು ಮತ್ತು ಬಣ್ಣದ ಜನರ (People of Colour) ಆಂತರಿಕ ಜೀವನವನ್ನು ಸೂಕ್ಷ್ಮವಾಗಿ ಹಿಡಿದಿಟ್ಟು, ಅಂಚಿನಲ್ಲಿರುವ ಸಮುದಾಯಗಳು ಬದುಕುಳಿಯುವಿಕೆ, ಸಂತೋಷ, ಗುರುತು ಮತ್ತು ಪ್ರದರ್ಶನವನ್ನು ಹೇಗೆ ನಿರ್ವಹಿಸುತ್ತವೆ ಎಂಬುದನ್ನು ಈ ಚಿತ್ರವು ಭಾವನಾತ್ಮಕ ಆಳದೊಂದಿಗೆ ಕಟ್ಟಿಕೊಡುತ್ತದೆ.

ಪಂಕಜ ಚಿತ್ರವು ಜನವರಿ 22 ರಿಂದ ಫೆಬ್ರವರಿ 1, 2026 ರವರೆಗೆ ಉತಾಹ್ನ ಸಾಲ್ಟ್ ಲೇಕ್ ಸಿಟಿಯಲ್ಲಿ ನಡೆಯಲಿರುವ ಸನ್ ಡಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಕನ್ನಡಕ್ಕೆ ಜಾಗತಿಕ ವೇದಿಕೆ

ಶಿಕ್ಷಣ ಮತ್ತು ಉತ್ಸವದ ಕೆಲಸದ ಜೊತೆಗೆ, ಅನೂಯಾ ಅವರು ಭಾರತದಲ್ಲಿ ‘ಪಂಡು’ ಎಂಬ ಮಾಧ್ಯಮ ಕಂಪನಿಯನ್ನು ನಡೆಸುತ್ತಿದ್ದಾರೆ. ಇದು ನಿರೂಪಣಾ ಸಿನಿಮಾ, ಸಾಕ್ಷ್ಯಚಿತ್ರಗಳು, ಪ್ರಾಯೋಗಿಕ ಚಲನಚಿತ್ರಗಳು ಮತ್ತು ವಾಣಿಜ್ಯ ಯೋಜನೆಗಳನ್ನು ನಿರ್ಮಿಸುವ ಮೂಲಕ ಸ್ವತಂತ್ರ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುತ್ತಿದೆ.

ಸನ್ ಡಾನ್ಸ್  2026 ರಲ್ಲಿ ‘ಪಂಕಜ’ ಪ್ರದರ್ಶನದೊಂದಿಗೆ, ಅನೂಯಾ ಸ್ವಾಮಿ ಅವರು ಸಮಕಾಲೀನ ಜಾಗತಿಕ ಸಿನಿಮಾ ರಂಗದಲ್ಲಿ ಅತ್ಯಂತ ಪ್ರಭಾವಶಾಲಿ ದಕ್ಷಿಣ ಏಷ್ಯಾದ ಧ್ವನಿಯಾಗಿ ಹೊರಹೊಮ್ಮಿದ್ದು, ಕನ್ನಡ ಮತ್ತು ಭಾರತೀಯ ಸ್ವತಂತ್ರ ಚಲನಚಿತ್ರ ನಿರ್ಮಾಪಕರಿಗೆ ಹೊಸ ಹೆಗ್ಗುರುತನ್ನು ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಅನೂಯಾ ಸ್ವಾಮಿರವರು ಈ ಪ್ರಶಸ್ತಿಗಾಗಿ ತನ್ನ “ಪಂಕಜ” ಕಿರು ಚಿತ್ರದಲ್ಲಿ ಅಭಿನಯಿಸಿದ ಕಲಾವಿದರಿಗೆ, ನಿರ್ಮಾಪಕರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಪ್ರಮುಖವಾಗಿ ಕಿರು ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಪುಟ್ಟ ಹುಡುಗಿ ಅಗರ ಸರ್ಕಾರಿ ಶಾಲೆಯ ೩ನೇ ತರಗತಿಯ ಪದ್ಮ ಹಾಗೂ ಆಕೆಯ ಪೋಷಕರಿಗೆ ಮತ್ತು ತಾಯಿ ಪಾತ್ರದಲ್ಲಿ ಅಭಿನಯಿಸಿದ ಹರ್ಷಿಣಿಯವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಹಲವು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಕೌಶಲ್ಯ ರಥ ಕಾರ್ಯಕ್ರಮ
Next: ರಬ್ಬರ್ ಬೆಳೆಯನ್ನು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಒಳಪಡಿಸುವ ಪ್ರಸ್ತಾವನೆ ಇಲ್ಲ: ಸಂತೋಷ್ ಲಾಡ್

Views:

58

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.