ಶಹಾಪುರ: ಪ್ರಜಾಸೌಧ ನಿರ್ಮಾಣ ಗೊಂದಲಕ್ಕಿಡು ಮಾಡಿದ್ದು, ಕಾಲೇಜು ಶಿಕ್ಷಣಕ್ಕಾಗಿ ಕಾಯ್ದಿರಿಸಿದ ಜಮೀನುನಲ್ಲಿ ಕಟ್ಟಡ ಮಾಡುವದರಿಂದ ಮಕ್ಕಳ ವಿಧ್ಯಾಭ್ಯಾಸಗಳಿಗೆ ತೀವ್ರ ತೊಂದರೆಯಾಗುತ್ತದೆ. ಅಲ್ಲದೆ ಶಿಕ್ಷಣ ಅಭಿವೃದ್ದಿಗಾಗಿ ಮೀಸಲಿಟ್ಟಿದ್ದ ಜಮೀನು ಪರಬಾರೆ ಮಾಡುವುದರ ಕಾನೂನು ನೀತಿ ಉಲ್ಲಂಘನೆಯಾಗುತ್ತಿದ್ದರೂ, ಸ್ಥಳೀಯ ಆಡಳಿತ ಪ್ರಜಾಸೌಧ ಕಟ್ಟಡಕ್ಕೆ ಮುಂದಾಗಿದ್ದನ್ನು ವಿರೋಧಿಸಿ ಎಬಿವಿಪಿ ಸಾಮೂಹಿಕ ಸಂಘಟನೆಗಳ ಒಕ್ಕೂಟ, ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡರು ಡಿಗ್ರಿ ಕಾಲೇಜು ಎದುರಿನಲ್ಲಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ರೈತ ಮುಖಂಡರಾದ ಮಲ್ಲಣಗೌಡ ಪರಿವಾಣ ಮತ್ತು ಮಹೇಶಗೌಡ ಸುಬೇದಾರವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ಪ್ರಜಾಸೌಧ ಸ್ಥಳಾಂತರದವರೆಗೂ ನಡೆಯುತ್ತದೆ ಎಂದು ಮಹೇಶಗೌಡ ಸುಬೇದಾರವರು ಪತ್ರಿಕೆಗೆ ತಿಳಿಸಿದರು. ಸ್ನಾತಕ ಮತ್ತು ಸ್ನಾತಕೋತ್ತರ ಶೈಕ್ಷಣಿಕ ವರ್ಷದಲ್ಲಿ ವಿಧ್ಯಾರ್ಥಿಗಳು ದೇವದುರ್ಗಾ, ಸುರುಪುರ, ಜೇವರ್ಗಿಗಳಿಂದ ಇಲ್ಲಿನ ಕಾಲೇಜಿಗೆ ಬರುತ್ತಿದ್ದಾರೆ. ಅಲ್ಲದೆ ಇಲ್ಲಿ ಸುತ್ತಮುತ್ತಲಿನಲ್ಲಿ ಆದರ್ಶ ಮಾಹಾ ವಿಧ್ಯಾಲಯ, ಮತ್ತು ಮಾದರಿಯ ಪ್ರಥಮ ದರ್ಜೆ ಕಾಲೇಜು ವಸತಿ ಸಹಿತ ಮತ್ತು ವಿಶಾಲದಲ್ಲಿ ಕ್ರೀಡಾಂಗಣವಿದೆ ಆದ್ದರಿಂದ ಪ್ರಜಾಸೌಧ ಹಳೆ ತಹಸೀಲ್ದಾರ ಕಚೇರಿ ಅವರಣದಲ್ಲಿ ನಿರ್ಮಾಣ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹ ಮಾಡಿದರು. ಇದನ್ನೂ ಓದಿ: ಮಕ್ಕಳ ನೆಚ್ಚಿನ ಆಯ್ಕೆಯನ್ನು ಪ್ರೋತ್ಸಾಹಿಸಿ : ಲಕ್ಷ್ಮೀ ಹೆಬ್ಬಾಳಕರ್
ಈ ಸದರ್ಭದಲ್ಲಿ ದಲಿತ ಮುಖಂಡರಾದ ಶಾಂತಪ್ಪ ಸಾಲಿಮನಿ, ಮರೆಪ್ಪ ಜಾಲಿಮೆಂಚಿ, ಅನಿಲ ಸಾಕರೆ, ಮಾಹಾಂತಗೌಡ ಪಾಟೀಲ್ ಮದ್ದರ್ಕಿ, ಆಂಜನೆಯ ಗಾಂಜೀ, ಶಿವಲಿಂಗ ಮದ್ದರ್ಕಿ, ಸಂತೋಷ ಸಾಹುಕಾರ, ಶಿವುಕುಮಾರ ಮಲ್ಲೇದ, ಶಂಕರ ಪಡಶೆಟ್ಟಿ, ರಮೇಶ ಗಾಂಜೀ, ಮಹಮ್ಮದ ಇಸ್ಮಾಯಿಲ್, ಸೇರಿದಂತೆ ಕಾರ್ಯಕರ್ತರು ಇದ್ದರು,
