ಮಕ್ಕಳ ಭವಿಷ್ಯದ ಜೊತೆ ಡಿಡಿಪಿಐ, ಬಿಇಓ ಚೆಲ್ಲಾಟ/ ಅನಿರೀಕ್ಷಿತ ಬೇಟಿ, ಕ್ರಮದ ಭರವಸೆ
ಶಹಾಪುರ: ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ಕೃಪಕಟಾಕ್ಷದಿಂದಲೇ ತಾಲೂಕಿನೆಲ್ಲೇಡೆ ಅನಧೀಕೃತ ಕೋಚಿಂಗ್, ಶಾಲೆಗಳು ಬೇರೂರಿದ್ದು, ಕಾನೂನು ಬಾಹಿರವಾಗಿ ನಡೆಸುತ್ತಿರುವ ಶಾಲೆ, ವಸತಿ, ಕೊಚಿಂಗ್ ಕೇಂದ್ರಗಳನ್ನು ತಕ್ಷಣವೇ ಮುಚ್ಚಿಸಬೇಕು ಇಲ್ಲವೇ ಇದರ ಮುಂದಿನ ಪರಿಣಾಮ ಬಹಳ ಘೋರವಾಗಿರಲಿದ್ದು, ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳೆ ನೇರ ಹೊಣೆ ಎಂದು ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಆಗ್ರಹಿಸಿದರು.
ನಗರದ ಬಿಇಓ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಕ್ಕಳ ಭವಿಷ್ಯಕ್ಕೆ ದಕ್ಕೆಯಾಗದಂತೆ ಇಲಾಖೆಯು ನೇಪಕ್ಕೆ ಶಾಲೆಗಳಿಗೆ ನೋಟಿಸ್ ನೀಡಿದ್ದಾಯಿತು. ಆದರೆ ಬಹುತೇಕ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ. ಅರ್ಹತೆ ಇಲ್ಲದ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಾರೆ. ಮನಸ್ಸಿಗೆ ಬಂದAತೆ ಶಾಲಾ ಶುಲ್ಕ ಪಡೆದು ಪೋಷಕರನ್ನು ವಂಚಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯಲ್ಲಿ ನೋಟಬುಕ್, ಪಠ್ಯಪುಸ್ತಕ, ಬ್ಯಾಗ್ ಮಾರಾಟ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ಸುತ್ತೊಲೆಯನ್ನು ಗಾಳಿಗೆ ತೂರಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಇಷ್ಠೆಲ್ಲಾ ಡಿಡಿಪಿಐ, ಬಿಇಓ ಅವರ ಗಮನಕ್ಕಿದ್ದರೂ ಸಹ ಯಾವುದೇ ಕ್ರಮಗಳು ಆಗದೇ ಇರುವುದು ನಿಜಕ್ಕೂ ನಾಚಿಕೇಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ, ಅನಧೀಕೃತ ಕೊಚಿಂಗ್, ವಸತಿ ಶಾಲೆಗಳು ಮುಚ್ಚವಂತೆ ನಮ್ಮ ಕರ್ನಾಟಕ ಸೇನೆಯ ವತಿಯಿಂದ ಕಳೆದ ಎರಡು ವರ್ಷಗಳಿಂದ ನಿರಂತರ ಹೋರಾಟಗಳು ನಡೆಯುತ್ತಲೇ ಇದೆ. 2024ರ ಆ.1ರಂದು ನಡೆದ ಹೋರಾಟದಲ್ಲಿ ಡಿಡಿಪಿಐ ಅವರು ಲಿಖಿತ ಭರವಸೆಗಳು ನೀಡಿದ ನಂತರ ಉಪವಾಸ ಸತ್ಯಾಗ್ರಹ ಹಿಂಪಡೆಯಲಾಗಿತ್ತು, ಆದರೆ ಈ ವರೆಗೂ ನೊಟೀಸ್ ನೀಡಿದ್ದಾರೆಯೇ ಹೊರತು, ಇದರಿಂದ ಯಾವುದೇ ಅನಧಿಕೃತ ಶಾಲೆಗಳು ಮುಚ್ಚಿಲ್ಲಾ. ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಅಂತಹ ಶಾಲೆಗಳಲ್ಲಿ ನಡೆಯುವ ಸಮಾರಂಭಗಳಿಗೆ ತೆರಳಿ ಅತಿಥಿ ಸ್ಥಾನ ವಹಿಸಿ ಭಾಷಣ ಹೊಡೆದು ಬರುತ್ತಾರೆ. ಇದರಿಂದ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸುವವರೆ ಇಲ್ಲದಂತಾಗಿದೆ ಮೇಲಾಧಿಕಾರಿಗಳು ಪರಿಶೀಲನೆಗೆ ಬರುತ್ತಾರೆ ಎಂದರೆ ನಿಮ್ಮಲ್ಲಿನ ಕೇಲ ಅಧಿಕಾರಿಗಳೇ ಮುನ್ಸೂಚನೆ ನೀಡುತ್ತಾರೆ ಎಂದು ಪ್ರತಿಭಟನಕಾರರು ಕಿಡಿಕಾರಿದರು.
ಅನಿರೀಕ್ಷಿತ ಬೇಟಿ, ಕ್ರಮದ ಭರವಸೆ
ಅನಧೀಕೃತ ಶಾಲೆ, ವಸತಿ, ಕೊಚಿಂಗ್ಗಳು ಬಂದ್ ಆಗಬೇಕು, ಅಥವಾ ಭ್ರಷ್ಠ ಅಧಿಕಾರಿಗಳು ಅಮಾನತುಗೊಳ್ಳಬೇಕು ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಶಿಕ್ಷಣ ಇಲಾಖೆಯ ಉಪನಿರ್ಧೇಶಕರು ದೂರವಾಣಿ ಮೂಲಕ ಸಂಪರ್ಕಿಸಿ ಅನಿರೀಕ್ಷಿತವಾಗಿ ಶಾಲೆಗಳಿಗೆ ಬೇಟಿ ನೀಡಿ ಸೂಕ್ತ ಕ್ರಮ ವಹಿಸುವುದಾಗಿ ಕಚೇರಿಯ ಪ್ರತಿನಿಧಿ, ಪರಿಕ್ಷಕರಾದ ಸುಜಾತಾ ಅವರು ಲಿಖಿತ ಪತ್ರ ನೀಡಿದ ಬಳಿಕ ಧರಣಿಯನ್ನು ಹಿಂಪಡೆಯಲಾಯಿತು. ಈ ವೇಳೆ ಬಿಇಓ ವೈ.ಎಸ್ ಹಾರಗಿ ಇದ್ದರು. ಇದನ್ನೂ ಓದಿ: ಪತ್ರಿಕೋದ್ಯಮ ಪದವೀಧರರಿಂದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ
ಪ್ರತಿಭಟನೆ ವೇಳೆ ಅನಧೀಕೃತ ಶಾಲೆ, ವಸತಿಗಳ ಮಾಲೀಕನೊರ್ವ ಕರೆ ಮಾಡಿ ಬೆದರಿಕೆ ಹಾಕಿ ಅಧಿಕಾರಿಗಳು ಮತ್ತು ಪ್ರತಿಭಟನಕಾರರ ಮೇಲೆ ದೂರು ದಾಖಲಿಸುವ ಬೆದರಿಕೆ ಹಾಕಿದ್ದು, ಪ್ರತಿಭಟನಕಾರರನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಶ್ವರಾಧ್ಯ ದಿಮ್ಮೆ, ತಾಲೂಕ ಅಧ್ಯಕ್ಷ ಸಿದ್ದು ಪಟ್ಟೇದಾರ, ಶ್ರೀದೇವಿ ಕಟ್ಟಿಮನಿ, ಅಂಬರೀಶ ತೆಲಗೂರ, ವಿಶ್ವರಾಧ್ಯ ದೇಸಾಯಿ, ಶೇಖರ ಕೊಡ್ಲಿ, ಮಲ್ಲು ಕಲ್ಮನಿ, ಮಹೇಶ ಪಾಟೀಲ, ರಾಜು ಸಿಂಗ್, ಚಂದ್ರು ಹಲಗಿ, ಶರಣು ದೇವರಮನಿ, ಗುರುರಾಜ ಅಂಗಡಿ, ಅಂಬಣ್ಣ ನಾಟೇಕರ ಸದ್ಧಾಂ ಮಠ, ಕಿರಣ ಗುಂಟನೂರ, ದೇವು, ಶಂಕರ ಜಾಗಿರದಾರ, ಹಣಮಂತ್ರಾಯ, ಮಾನಪ್ಪ, ರಮೇಶ, ಅನಿಲಕುಮಾರ, ರಫೀಕ ಮುಜಾವಾರ ಸೇರಿದಂತೆ ಇತರರು ಇದ್ದರು.
