ಮಹಿಳಾ ಆಯೋಗದಿಂದ ಮುತುರ್ಜಿ/ ತಿಪ್ಪನಹಳ್ಳಿ ಗ್ರಾಮಸ್ಥರು, ವಿದ್ಯಾರ್ಥಿಗಳಿಂದ ಅಭಿನಂದನೆ
ಶಹಾಪುರ: ದಿನದಲ್ಲಿ ಮೊದಲು ಮೂರು ತರಗತಿ ತಪ್ಪಿಸಿಕೊಳ್ಳುವ ವಿದ್ಯಾರ್ಥಿಗಳು, ಹೆದ್ದಾರಿಗಳಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ. ಇದರಿಂದ ನಿತ್ಯ ಮನಸ್ಸಿನಲ್ಲಿಯೇ ಅಧಿಕಾರಿಗಳಿಗೆ ಹಿಡಿಶಾಪ ಹಾಕುವ ಮಕ್ಕಳು. ಇದು ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳ ಗೋಳು.
ಗ್ರಾಮೀಣ ಭಾಗದಲ್ಲಿ ಎಚ್ಚೆತ್ತವಾಗಿ ಬಸ್ಗಳು ಬಾರದ ಹಿನ್ನಲೇ ಶಾಲಾ, ಕಾಲೇಜು ವಿದ್ಯಾರ್ಥಿಗಳ ಸ್ಥೀತಿ ಶೊಚನೀಯವಾಗಿದೆ, ಬಸ್ಗಳ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಹೊಡೆತ ಬೀಳುತ್ತಿದೆ. ತರಗತಿಯ ಸಮಯಕ್ಕೆ ಹಾಜರಾಗಲು ಆಗುತ್ತಿಲ್ಲಾ. ಇದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳ ಹೈರಾಣಾಗುತ್ತಿದ್ದಾರೆ.
ಬಸ್ ವ್ಯವಸ್ಥೆ ಬಿಟ್ಟರೆ ಗ್ರಾಮೀಣ ಭಾಗದ ಪಾಲಕರಿಗೆ ಹಣಕಾಸಿನ ಸಮಸ್ಯೆ ಇದೆ. ಇದರಿಂದ ಸಮಯಕ್ಕೆ 10ನೇ ತರಗತಿ ವಿದ್ಯಾರ್ಥಿಗಳು , ಪಿಯು ಹಾಗೂ ಅಂತಿಮ ವರ್ಷದ ಪದವಿ ತರಗತಿಗಳ ವಿದ್ಯಾರ್ಥಿಗಳು ಹಾಜರಾಗಲು ಸಾಧ್ಯವಾಗುತ್ತಿಲ್ಲ ಶಾಲಾ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಹೆಚ್ಚು ಆಟೋಗಳನ್ನು ಅವಲಂಬಿಸಿದ್ದಾರೆ.
ಇನ್ನೂ6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳ ಸಹ ಬಸ್ ವ್ಯವಸ್ಥೆ ಇಲ್ಲದೇ ಇದ್ದು, ಮಕ್ಕಳನ್ನು ತಾಲೂಕ ಕೇಂದ್ರಗಳಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಪ್ರತಿಸಲ ಹೋರಾಟ ಮಾಡಿದಾಗ ಒಂದು ವಾರ ವ್ಯವಸ್ಥೆ ಮಾಡಿ ಮತ್ತದೇ ಮುಂದುವರೆಸುತ್ತಾರೆ. ಕೂಡಲೇ ಸಾರಿಗೆ ಇಲಾಖೆ ಬೆಳಿಗ್ಗೆ ಹಾಗೂ ಸಂಜೆ ಬಸ್ಗಳ ಪ್ರಮಾಣ ಹೆಚ್ಚಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಬೆಳಗಿನ ಜಾವವೇ ಮಕ್ಕಳು ಮನೆಯಿಂದ ಹೊರಡ ಬೇಕಿದ್ದು ಶಾಲೆ ತಲುಪಲು 12 ಗಂಟೆ ಆಗುತ್ತದೆ ಅಷ್ಟರಲ್ಲಿ3 ತರಗತಿ ಮುಗಿದೇ ಹೋಗಿರುತ್ತದೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು ಇದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳೇ ನೇರ ಕಾರಣರಾದಂತಿದೆ.
ನಿತ್ಯ ಕಾಲ್ನಡಿಗೆಯ ಮೂಲಕ ಶಾಲೆಗೆ ಹೋಗಬೇಕಾದ ಸ್ಥೀತಿ ನಮಗೆ ಇದ್ದು, ಆಗೊಮ್ಮೆ ಈಗೊಮ್ಮೆ ಬಸ್ ಬರಲಿದೆ. ಅದು ಸಹ ಸಮಯಕ್ಕೆ ಬರಲ್ಲಾ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ತೆಗೆದು ಕೊಳ್ಳುತ್ತಿಲ್ಲಾ. ನಮಗೆ ಬಸ್ ಸೌಲಭ್ಯ ಕಲ್ಪಿಸಿ ಪುಣ್ಯ ಕಟ್ಕೊಳ್ಳಿ ಎನ್ನುವುದು ವಿದ್ಯಾರ್ಥಿಗಳ ಅಳಲಾಗಿದೆ. ಇನ್ನೂ ಕೇಲ ಬಸ್ ಚಾಲಕರು ಹೊಸ ಬಸ್ ನಿಲ್ದಾಣದಲ್ಲೇ ನಿಲ್ಲಿಸುತ್ತಿದ್ದು, ಅಲ್ಲಿಂದ ಹಳೆ ಬಸ್ ನಿಲ್ದಾಣಕ್ಕೆ ತೆರಳಲು ಆಟೋದವರು 50 ರೂ ಕೇಳುತ್ತಾರೆ. ಇದರಿಂದ ಬಸ್ಗಳ ಚಾಲಕರು ಹಳೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎನ್ನುವುದು ಪ್ರಯಾಣಿಕರ ಮನವಿಯಾಗಿದೆ.
ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರಿಗೆ ಅಭಿನಂದನೆ
ತಾಲೂಕಿನ ತಿಪ್ಪನಹಳ್ಳಿ ಗ್ರಾಮದಲ್ಲಿ ಬಸ್ ಬಾರದೇ ವಿದ್ಯರ್ಥಿಗಳು ಸಮಸ್ಯೆ ಎದುರಿಸುವಂತಾಗಿದ್ದರಿಂದ ಈ ಬಗ್ಗೆ ಗ್ರಾಮಸ್ಥರು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರ ಎದುರು ತಮ್ಮ ಸಮಸ್ಯೆ ಹೇಳಿಕೊಂಡ ನಂತರ ಆಯೋಗದ ಅಧ್ಯಕ್ಷರು ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಬಸ್ನ ವ್ಯವಸ್ಥೆ ಮಾಡಲು ಸೂಚಿಸಿದ ನಂತರ ತಿಪ್ಪನಹಳ್ಳಿ ಗ್ರಾಮಕ್ಕೆ ಬಸ್ನ ವ್ಯವಸ್ಥೆ ಮಾಡಿದ್ದು ವಿದ್ಯರ್ಥಿಗಳು, ಗ್ರಾಮಸ್ಥರು ಅಧ್ಯಕ್ಷರಿಗೆ ಅಭಿನಂದನೆ ತಿಳಿಸಿದ್ದಾರೆ.
ನಮ್ಮಲ್ಲಿ ಹೆಚ್ಚಿನ ಚಾಲಕ, ನಿರ್ವಾಹಕ ಕೊರತೆ ಒಂದೆಡೆಯಾದರೆ, ಅಗತ್ಯಕ್ಕೆ ಅನುಗುಣವಾಗಿ ಬಸ್ಗಳ ವ್ಯವಸ್ಥೆ ಇಲ್ಲಾ. ಇದರಿಂದ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಈಗಾಗಲೇ ಬೇವಿನಹಳ್ಳಿ, ಮಕ್ತಾಪುರ, ತಿಪ್ಪನಹಳ್ಳಿ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಬಸ್ಗಳ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ವಿ.ಆರ್ ರೆಡ್ಡಿ. ಡಿಟಿಓ ಹೇಳಿದ್ದಾರೆ.
