Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಪುಟ್ಟಣ್ಣ ಕಣಗಾಲ್ ಕನ್ನಡ ಸಂಸ್ಕೃತಿಯ ನೇಕಾರರು: ಕೆ.ವಿ.ಪಿ
  • Bangalore
  • Politics
  • State

ಪುಟ್ಟಣ್ಣ ಕಣಗಾಲ್ ಕನ್ನಡ ಸಂಸ್ಕೃತಿಯ ನೇಕಾರರು: ಕೆ.ವಿ.ಪಿ

Praja Vahini December 1, 2025 1 minute read
WhatsApp Image 2025-12-01 at 12.40.07
Spread the love

ಬೆಂಗಳೂರು: ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಸಂಸ್ಕೃತಿಯ ನೇಕಾರರಾಗಿ, ಭಾವನೆಗಳು ಮತ್ತು ಕಲೆಯ ಬೆಸುಗೆ ಹಾಕಿದರು. ಸಾಹಿತ್ಯ ಮತ್ತು ಸಿನಿಮಾದ ಬೆಸುಗೆ ಹಾಕಿದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ದಿ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರ 93ನೇ ಜನ್ಮದಿನೋತ್ಸವವನ್ನು ಉದ್ಘಾಟಿಸಿ, ಸಂಸ್ಥೆ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಪುರಸ್ಕೃತರಿಗೆ ನೀಡಿ ಗೌರವಿಸಿ ಮಾತನಾಡಿದ‌ ಅವರು, ಓದುಗರಿಗೆ ಸಿನಿಮಾವನ್ನೂ, ನೋಡುಗರಿಗೆ ಸಾಹಿತ್ಯವನ್ನೂ ತಲುಪಿಸುವ ಮೂಲಕ ಎರಡು ಕಲಾ ಮಾಧ್ಯಮಗಳ ಜೀವಂತಿಕೆ ಹೆಚ್ಚಿಸಿದರು.

ಕನ್ನಡದ ಮಹತ್ವದ ಕಾದಂಬರಿಗಳನ್ನು ಮತ್ತು ಸಾಹಿತ್ಯ ಕೃತಿಗಳನ್ನು ಯಶಸ್ವಿಯಾಗಿ ಚಲನಚಿತ್ರಗಳಿಗೆ ಅಳವಡಿಸಿ, ಸಾಹಿತ್ಯ ಮತ್ತು ಚಲನಚಿತ್ರ ಮಾಧ್ಯಮಗಳ ನಡುವೆ ಸೇತುವೆಯಾಗಿದ್ದರು ಎಂದರು.

ಶರಪಂಜರ, ನಾಗರಹಾವು, ಬೆಳ್ಳಿಮೋಡ, ಗೆಜ್ಜೆಪೂಜೆ

ಕಥಾಸಂಗಮ’ ‘ಮಾನಸ ಸರೋವರ’, ‘ರಂಗನಾಯಕಿ’

ಕಣಗಾಲ್ ಅವರ ಕಲಾತ್ಮಕ ಬೆಸುಗೆಯ ಕೆಲವು ಮಾಸ್ಟರ್ ಪೀಸ್ ಗಳು ಎಂದು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಸಿನಿಮಾ ನಿರ್ದೇಶಕರಿಗೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟ ಕನ್ನಡದ ಮೊದಲ ನಿರ್ದೇಶಕ ಎನ್ನಬಹುದು.

ಕಣಗಾಲ್ ಸಿನಿಮಾಗಳು ಕೇವಲ ಮನರಂಜನೆಯಾಗಿರದೆ, ನೆರಳು ಬೆಳಕಿನ ಮೂಲಕ ಸಮಾಜದ ವಾಸ್ತವ ಮತ್ತು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಕಟ್ಟಿಕೊಡುತ್ತಿದ್ದವು ಎಂದು ಶ್ಲಾಘಿಸಿದರು.

ಅವರ ಉತ್ತಮ ಗುಣಮಟ್ಟದ ಸಿನಿಮಾಗಳು ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಇದನ್ನೂ ಓದಿ: ಬಿಬಿಕೆ ಮನೆಯಿಂದ ಜಾನ್ವಿ ಔಟ್

ಸಿನಿಮಾದಲ್ಲಿ ಸ್ತ್ರೀವಾದವನ್ನು ಅಚ್ಚುಕಟ್ಟಾಗಿ ಮುನ್ನಲೆಗೆ ತಂದು, ಹೆಣ್ಣುಸಂಕುಲದ ತಲ್ಲಣಗಳನ್ನು ಮನಮುಟ್ಟುವಂತೆ ಕಟ್ಟಿಕೊಟ್ಟರು ಎಂದು ವಿವರಿಸಿದರು.

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಸಿನಿಮಾ ಅಭಿವೃದ್ಧಿಗೆ ನಿರಂತರ ಪ್ರೋತ್ಸಾಹ ಮತ್ತು ನೆರವು ನೀಡುತ್ತಿದ್ದಾರೆ. ಏಕರೂಪ ಟಿಕೆಟ್ ದರ ನಿಗಧಿ ಮಾಡುವ ಸಂಬಂಧ ನ್ಯಾಯಾಲಯದಲ್ಲಿರುವ ವಿವಾದ ಬಗೆಹರಿಯುತ್ತಿದ್ದಂತೆ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

About the Author

Praja Vahini

Editor

View All Posts

Spread the love

Post navigation

Previous: ಬಿಬಿಕೆ ಮನೆಯಿಂದ ಜಾನ್ವಿ ಔಟ್
Next: ವಿಧಾನ ಸೌಧ – ಕೆಂಗಲ್‌ ಹನುಮಂತಯ್ಯನವರು ಬಿಟ್ಟು ಹೋಗಿರುವ ಸಾಕ್ಷಿ: ಸಿಎಂ

Views:

37

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.