ದೆಹಲಿ: ಭಾರತ ರಾಷ್ಟ್ರದ ಶಕ್ತಿ, ಸ್ಫೂರ್ತಿ ಮತ್ತು ದೃಢ ನಾಯಕತ್ವದ ಪ್ರತಿರೂಪರಾದ ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ 108ನೇ ಜನ್ಮಜಯಂತಿಯ ಅಂಗವಾಗಿ ಇಂದು (ಬುಧವಾರ ನ. 18)ನವದೆಹಲಿಯ ಶಕ್ತಿ ಸ್ಥಲ್‌ನಲ್ಲಿ ಸಚಿವ ಕೆ ಹೆಚ್ ಮುನಿಯಪ್ಪ ಅವರು ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ವಿಡಿಯೋ ವೈರಲ್: ವಿಜಯಲಕ್ಷ್ಮಿ ಹೆಸರು ಬಾಯ್ಬಿಟ್ಟಿ ಧನ್ವೀರ್!
ರಾಷ್ಟ್ರದ ಏಕತೆ, ಅಭಿವೃದ್ಧಿ ಮತ್ತು ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಅವರು ಸಲ್ಲಿಸಿದ ಮಹತ್ವದ ಕೊಡುಗೆಗಳು ಇಂದಿಗೂ ನಮ್ಮ ರಾಷ್ಟ್ರನಿರ್ಮಾಣದ ದಾರಿಯಲ್ಲಿ ಮಾರ್ಗದೀಪವಾಗಿವೆ. ಅವರ ದೃಢ ಸಂಕಲ್ಪ, ದೂರದೃಷ್ಟಿ ಮತ್ತು ರಾಷ್ಟ್ರಭಕ್ತಿ ಪ್ರತಿಯೊಬ್ಬ ಭಾರತೀಯನಿಗೂ ಸದಾ ಸ್ಫೂರ್ತಿ ಎಂದಿದ್ದಾರೆ.
