Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮಾಧ್ಯಮ ಎಂದರೆ ಕೇವಲ ಮಾಹಿತಿ ಕೊಡುವಂಥದ್ದಲ್ಲ: ಯು ಟಿ ಖಾದಿರ್
  • Bangalore
  • Politics
  • State

ಮಾಧ್ಯಮ ಎಂದರೆ ಕೇವಲ ಮಾಹಿತಿ ಕೊಡುವಂಥದ್ದಲ್ಲ: ಯು ಟಿ ಖಾದಿರ್

Praja Vahini November 17, 2025 1 minute read
WhatsApp Image 2025-11-17 at 12.04.51
Spread the love

ಬೆಂಗಳೂರು: ನಮ್ಮ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಪತ್ರಿಕೆಗಳು ಹಾಗೂ ಸುದ್ದಿ ಸಂಸ್ಥೆಗಳ ಮಟ್ಟವನ್ನು ಕಾಪಾಡುವ ಮತ್ತು ಸುಧಾರಿಸುವ ಉದ್ದೇಶದಿಂದ ಭಾರತೀಯ ಪತ್ರಿಕಾ ಮಂಡಳಿ (Press Council of India – PCI) ಯನ್ನು 1966ರ ನವೆಂಬರ್ 16 ರಂದು ಸ್ಥಾಪಿಸಲಾಯಿತು. ಈ ಕಾರಣದಿಂದಾಣ ಪ್ರತಿ ವರ್ಷ ನವೆಂಬರ್ 16 ರಂದು ರಾಷ್ಟ್ರೀಯ ಪತ್ರಿಕಾ ದಿನವನ್ನು ಆಚಲಿಸಲಾಗುತ್ತದೆ.

ಅದರಂತೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಇಂದು (ಸೋಮವಾರ ನವಂಬರ್ 17) ರಂದು ಅಂತರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದಿರ್ ಫರೀದ್, ಹಾಗೂ ಶ್ರೀಮತಿ ಆಯೇಶಾ ಖಾನ್ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರು, ಹಾಗೂ ಇನ್ನಿತರರು ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಯು ಟಿ ಖಾದರ್ ರವರು, ನಾನು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿಯೇ ಕೆಲವು ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದೆ. ಅದರಲ್ಲೂ ಕೂಡ ಪ್ರಮುಖವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗುವುದು ನಂತರ ಮಧ್ಯಾಹ್ನ 12 ಗಂಟೆಯಿಂದ ಪ್ರಕಟನೆ ಕೃಪೆಗಾಗಿ ಎಂದು ಪತ್ರಿಕೆಗಳಿಗೆ ಕೊಡುತ್ತಿದ್ದೆ. ನನಗೆ ಇದು ಚಿಕ್ಕ ವಯಸ್ಸಿನಿಂದಲೇ ಅಭ್ಯಾಸವಾಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಮೆಟ್ರೋ: ತುಮಕೂರು ನಗರವಾಸಿಗಳಿಗೆ ಸಿಹಿ ಸುದ್ದಿ!

ಮಾಧ್ಯಮ ಎನ್ನುವುದು ನಮ್ಮ ಪ್ರಜಾಪ್ರಭುತ್ವದ ನಾಲ್ಕನೆಯ  ಸ್ತಂಭ ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ. ಮಾಧ್ಯಮ ಎಂದರೆ ಕೇವಲ ಮಾಹಿತಿ ಕೊಡುವಂಥದ್ದಲ್ಲ. ಪತ್ರಿಕೆ ಎಂದರೆ ಒಂದು ಸಾಮಾಜಿಕ ಜವಾಬ್ದಾರಿಯ ಪ್ರತಿಕವಾಗಿದೆ. ಮಾಧ್ಯಮಕ್ಕೆ ಅತಿ ದೊಡ್ಡ ಜವಾಬ್ದಾರಿ ಎಂದರೆ ಅದು ಸಾಮಾಜಿಕ ಜವಾಬ್ದಾರಿ. ಪ್ರತಿ ಹಂತದಲ್ಲೂ ಕೂಡ ಒಳ್ಳೇದೇ ಇರಲಿ, ಕೆಟ್ಟದೇ ಇರಲಿ ಸಮಾಜದಲ್ಲಿ ಪ್ರತಿಯೊಂದು ಹಂತದಲ್ಲೂ ಕೂಡ ಬದಲಾವಣೆಯ ಪ್ರತಿಕವಾಗಿರುವುದೆಂದರೆ ಅದು ಮಾಧ್ಯಮ ಕ್ಷೇತ್ರ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ನ ಅಧ್ಯಕ್ಷರಾದ ಆರ್ ಶ್ರೀಧರ್, ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿಯಾದ ಶಿವಕುಮಾರ್ ಬೆಳ್ಳಿ ತಟ್ಟೆ ಸೇರಿದಂತೆ ಹಿರಿಯ ಪತ್ರಕರ್ತರು ಭಾಗವಹಿಸಿದ್ದರು.

 

About the Author

Praja Vahini

Editor

View All Posts

Spread the love

Post navigation

Previous: ವಿಚಾರಣೆಗೆ ಹಾಜರಾಗುವಂತೆ ಅರವಿಂದ್ ರೆಡ್ಡಿಗೆ ನೋಟಿಸ್ ಜಾರಿ!
Next: ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸಿ ಇಲ್ಲವೇ, ಸರ್ಕಾರ ಸಾವಿನ ಗ್ಯಾರಂಟಿ ನೀಡಲಿ!

Views:

45

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.