ಪಾಟ್ನಾ: ಬಿಹಾರದ ಲೋಕಸಭಾ ಚುನಾವಣೆಯ ಫಲಿತಾಂಶ ನಿನ್ನೆ (ಶುಕ್ರವಾರ n. 14) ಹೊರಬಿದ್ದಿದ್ದು ಇದರಲ್ಲಿ ಎನ್‌ಡಿ ಭರ್ಜರಿ ಬಹುಮತದಿಂದ ಗೆಲುವು ಸಾಧಿಸಿದ್ದು ಎಲ್ಲೆಡೆ ಮೋದಿ ಪಡೆ ಸಂಭ್ರಮ ಆಚರಣೆ ಮಾಡಿದೆ.
ಇನ್ನು ಎನ್ ಡಿಎ ಪಕ್ಷ ಬರ್ಜರಿ ಬಹುಮತದಿಂದ ಗೆದ್ದಿರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ, ಗಂಗಾ ಬಿಹಾರದಿಂದ ಬಂಗಾಳಕ್ಕೆ ಹರಿದು ಬಿಜೆಪಿಗೆ ಗೆಲುವಿನ ಹಾದಿಯನ್ನು ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು, ಬಿಹಾರದಲ್ಲಿ ಎನ್‌ಡಿಎ ಪಡೆದ ಭಾರಿ ಗೆಲುವು ನೆರೆಯ ಪಶ್ಚಿಮ ಬಂಗಾಳದಲ್ಲಿಯೂ ಇದೇ ರೀತಿಯ ಪ್ರದರ್ಶನಕ್ಕೆ ಅಡಿಪಾಯ ಹಾಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಏಷ್ಯಾದಲ್ಲೇ ಮೊದಲ ಬಾರಿಗೆ ಸಹಕಾರಿ ಬ್ಯಾಂಕ್ ಸ್ಥಾಪನೆಯಾಗಿದ್ದು ಕರ್ನಾಟಕದಲ್ಲಿ: ಸಿಎಂ
ಗಂಗಾ ನದಿ ಬಿಹಾರದ ಮೂಲಕ ಬಂಗಾಳಕ್ಕೆ ಹರಿಯುತ್ತದೆ. ಬಿಹಾರದಲ್ಲಿನ ಗೆಲುವು, ನದಿಯಂತೆ ಬಂಗಾಳದಲ್ಲಿ ನಮ್ಮ ಗೆಲುವಿಗೆ ದಾರಿ ಮಾಡಿಕೊಟ್ಟಿದೆ ಎಂದು ಮೋದಿ ಹೇಳಿದರು.
ನಿಮ್ಮ ಭರವಸೆಗಳು ನನ್ನ ಪ್ರತಿಜ್ಞೆ ಮತ್ತು ನಿಮ್ಮ ಕನಸುಗಳು ನನ್ನ ಸ್ಫೂರ್ತಿ. ಬಿಜೆಪಿಗೆ, ಪಕ್ಷದ ಕಾರ್ಯಕರ್ತರೇ ಅದರ ಶಕ್ತಿ. ಬಿಹಾರದಲ್ಲಿ ಅದ್ಭುತ ಪ್ರದರ್ಶನಕ್ಕೆ ಕಾರ್ಯಕರ್ತರೇ ಕಾರಣ ಎಂದು ಬಣ್ಣಿಸಿದರು.
