ಪಾಟ್ನಾ: ಬಿಹಾರದಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶ ಇಂದು (ಶುಕ್ರವಾರ ನ. 14) ಹೊರಬೀಳಲಿದ್ದು ಈಗಾಗಲೇ ಬೆಳೆಗೆ 8 ಗಂಟಿಯಿಂದಲೇ ಮತ ಎಣಿಕೆ ಆರಂಭವಾಗಿದ್ದು, ಈ ಜಿದ್ದಾಜಿದ್ದಿಯಲ್ಲಿ ಸಿಎಂ ಪಟ್ಟ ಯಾರ ಪಾಲಿಗೆ ಒಲಿಯುತ್ತದೆ ಎಂದು ಕುತೂಹಲ ಮೂಡಿಸದೆ.
ಹೌದು, ಬಿಹಾರ ವಿಧಾನಸಭೆ ಚುನಾವಣೆ ಮುಗಿದಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ. ಎರಡೂ ಪಕ್ಷಗಳು ಗ್ಯಾರಂಟಿಗಳ ಮಹಾಪೂರವನ್ನೇ ಹರಿಸಿದ್ದು, ಬಿಹಾರ ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.
ಇನ್ನು ರಾಜ್ಯದ 46 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. 243 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 6, 11ರಂದು 2 ಹಂತದ ಮತದಾನ ಆಗಿದ್ದು, ಶೇ.67.13ರಷ್ಟು ಐತಿಹಾಸಿಕ ವೋಟಿಂಗ್ ದಾಖಲಾಗಿದೆ. ಈ ಬಾರಿ ಮಹಿಳೆಯರು ಶೇ.71ರಷ್ಟು ಮತದಾನ ಮಾಡಿದ್ದು, ಮಹಿಳೆಯರ ಮತ ನಿರ್ಣಾಯಕವಾಗಿದೆ. ಇದನ್ನೂ ಓದಿ: ಕಬ್ಬು ಟ್ರ್ಯಾಕ್ಟರ್ಗಳಿಗೆ ಬೆಂಕಿ; ಕೇಂದ್ರ ಸಚಿವ ಹೆಚ್ ಡಿ ಕೆ ಹೇಳಿದ್ದೇನು?
ಅಧಿಕಾರಕ್ಕೇರಲು 122 ಸ್ಥಾನಗಳ ಸರಳ ಬಹುಮತ ಅಗತ್ಯವಾಗಿದ್ದು, ಎಕ್ಸಿಟ್ ಪೋಲ್ಗಳಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಬಹುಮತ ಸಿಗುವ ಸಾಧ್ಯತೆಗಳು ಇವೆ. ದೀರ್ಘಾವಧಿ ಸಿಎಂ ಆಗಿರುವ ಜೆಡಿಯು ನಾಯಕ ನಿತೀಶ್ ಕುಮಾರ್ 5ನೇ ಬಾರಿ ಅಧಿಕಾರ ಚುಕ್ಕಾಣಿ ಹಿಡೀತಾರಾ..? ಅಥವಾ ಹೊಸ ಪಕ್ಷ ಅಧಿಕಾರಕ್ಕೆ ಬರಲಿದ್ಯಾ ಅನ್ನೋ ಕುತೂಹಲ ಹೆಚ್ಚಾಗಿದೆ.
