Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸರ್ಕಾರಿ ಭೂಮಿಗೆ ಪೋಡಿ ದುರಸ್ತಿಗೆ ಆದೇಶ ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯ
  • Bangalore
  • Front news
  • Politics
  • State

ಸರ್ಕಾರಿ ಭೂಮಿಗೆ ಪೋಡಿ ದುರಸ್ತಿಗೆ ಆದೇಶ ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯ

Praja Vahini November 13, 2025 1 minute read
0e2a0db3-6509-4805-bb25-1deb14887dd3
Spread the love

ಕನಕಪುರ: ದಾಖಲೆಗಳ ನೈಜತೆ ಪರಿಶೀಲಿಸದೆ ಸರ್ಕಾರಿ ಭೂಮಿಗೆ ಪೋಡಿ ದುರಸ್ತಿಗೆ ಆದೇಶ ಮಾಡಿರುವ ಹಾರೋಹಳ್ಳಿ ತಹಸಿಲ್ದಾರ್ ಹರ್ಷವರ್ಧನ್ ಅವರ ಮೇಲೆ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ದಲಿತ ಸೇನೆ ಸಂಘಟನೆ ಪದಾಧಿಕಾರಿಗಳು ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಅವರಿಗೆ ದೂರು ಸಲ್ಲಿಸಿದ್ದಾರೆ.

ವಿಧಾನಸೌಧದಲ್ಲಿ ಸಚಿವರನ್ನು ಭೇಟಿ ಮಾಡಿರುವ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ದಲಿತ ಸೇನೆ ಸಂಘಟನೆ ಪದಾಧಿಕಾರಿಗಳು ಕಂದಾಯ ಇಲಾಖೆ ಸಚಿವರಿಗೆ ದೂರು ಸಲ್ಲಿಸಿ ಹಾರೋಹಳ್ಳಿ ತಹಸಿಲ್ದಾರ್ ಹರ್ಷವರ್ಧನ್ ಅವರು ಭೂ ಮಾಫಿಯಾ ದೊಂದಿಗೆ ಕೈಜೋಡಿಸಿ ದಾಖಲೆಗಳ ನೈಜತೆಯನ್ನು ಪರಿಶೀಲಿಸದೆ 50 ಕೋಟಿಗೂ ಹೆಚ್ಚು ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಪೋಡಿ ದುರಸ್ತಿಗೆ ಆದೇಶ ಮಾಡಿದ್ದಾರೆ ಎಂದು ಆರೂಪಿಸಿದರು.

ಹಾರೋಹಳ್ಳಿ ಸರ್ವೆ ನಂಬರ್ 478 ರಲ್ಲಿ ಎರಡು ಎಕರೆ ಜಮೀನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದಾರೆ. ಸದರಿ ಎರಡು ಎಕರೆ ಜಾಗ ಕೆ ಐ ಎ ಡಿ ಬಿ ಗೆ ಭೂ ಪರಿವರ್ತನೆಯಾಗಿದೆ ಕೆ ಐ ಎ ಡಿ ಬಿ ಯಿಂದ ಎನ್ ಓ ಸಿ ಯನ್ನು ಪಡೆಯದೆ ಓಡಿ ದುರಸ್ತಿ ಆದೇಶವನ್ನು ಮಾಡಿ ಸರ್ಕಾರಕ್ಕೆ 50 ಕೋಟಿಗೂ ಹೆಚ್ಚು ನಷ್ಟವನ್ನು ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತವರು ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಸುತ್ತಮುತ್ತಲು ಭೂಮಿಯ ಬೆಲೆ ಏರಿಕೆ ಆಗುತ್ತಿದ್ದಂತೆ ಭೂಮಾಫಿಯಾದ ಕಣ್ಣು ಸರ್ಕಾರಿ ಗೋಮಾಳಗಳ ಮೇಲೆ ಬಿದ್ದಿದೆ ಸರ್ಕಾರಿ ಗೋಮಾಳ ಮತ್ತು ಸರ್ಕಾರಿ ಭೂಮಿಗೆ ಕೆಲವರು ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ ಮಾಡುವ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಸರ್ಕಾರಿ ಜಾಗ ರಕ್ಷಣೆ ಮಾಡಬೇಕಾದ ಅಧಿಕಾರಿಗಳು ಭೂಗಳ್ಳರೊಂದಿಗೆ ಶಾಮಿಲಾಗಿ ಸರ್ಕಾರಿ ಭೂಮಿ ಕಬಳಿಕೆಗೆ ಬೆಂಬಲ ನೀಡುತ್ತಿರುವುದು ಮಾತ್ರ ದುರದೃಷ್ಟಕರ ಎಂದರು.

ಸದರಿ ಸರ್ಕಾರಿ ಜಮೀನು ಮೂಲ ಸರ್ಕಾರಿ ಖರಾಬು ಜಮೀನಾಗಿದ್ದು ದಾಖಲೆಗಳ ನೈಜತೆಗಳನ್ನು ಪರಿಶೀಲನೆ ಮಾಡಬೇಕೆಂದು ಸರ್ಕಾರದ ಸ್ಪಷ್ಟವಾದ ಆದೇಶ ಇದ್ದರೂ ಸಹ ತಹಸಿಲ್ದಾರ್ ಹರ್ಷವರ್ಧನ್ ಅವರು ದಾಖಲೆಗಳ ನೈಜತೆಯನ್ನು ಪರಿಶೀಲಿಸದೆ ಭೂ ಮಾಫಿಯಾ ದೊಂದಿಗೆ ಕೈಜೋಡಿಸಿ ಸದರಿ ಭೂಮಿಗೆ ಒ ಎಂ ,ಸಾಗುವಳಿ ಚೀಟಿ ನಕಲಿ ಚಲನ್ ನಕಲಿ ವಿಎ ವರದಿ ನಕಲಿ ನೋಟಿಸ್ ಗಳನ್ನು ಪರಿಶೀಲನೆ ಮಾಡದೆ ದುರಸ್ತಿ ಮಾಡಲು ಆದೇಶ ಮಾಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ್ದಾರೆ.

ಸರ್ಕಾರಿ ಭೂಮಿಯನ್ನು ರಕ್ಷಣೆ ಮಾಡಬೇಕಾದ ಅಧಿಕಾರಿಗಳೇ ಭೂ ಮಾಫಿಯಾ ದೊಂದಿಗೆ ಶಾಮೀಲಾಗಿ ದಾಖಲೆಗಳ ನೈಜ್ಯತೆಯನ್ನು ಪರಿಶೀಲಿಸದೆ ಸರ್ಕಾರಿ ಭೂಮಿ ಕಬಳಿಕೆಗೆ ಕಾರಣರಾಗಿರುವ ಹಾರೋಹಳ್ಳಿ ತಹಶೀಲ್ದಾರ್ ಹರ್ಷವರ್ಧನ್ ಅವರನ್ನು ಕೂಡಲೇ ಅಮಾನತ್ತು ಮಾಡಿ ಪ್ರಾದೇಶಿಕ ಆಯುಕ್ತರ ನೇತೃತ್ವದ ಸಮಿತಿಯಿಂದ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ.

 

About the Author

Praja Vahini

Editor

View All Posts

Spread the love

Post navigation

Previous: ನಮ್ಮ ನೀರು, ನಮ್ಮ ಹಕ್ಕು: ಡಿಸಿಎಂ
Next: ಕಬ್ಬು ಟ್ರ್ಯಾಕ್ಟರ್‌ಗಳಿಗೆ ಬೆಂಕಿ; ಕೇಂದ್ರ ಸಚಿವ ಹೆಚ್ ಡಿ ಕೆ ಹೇಳಿದ್ದೇನು?

Views:

22

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.