ಬೆಂಗಳೂರು: ಕನ್ನಡ ರಾಜ್ಯೋತ್ಸವವನ್ನು ಕೇವಲ ನಮ್ಮ ಕರ್ನಾಟಕದಲ್ಲಿ ಆಚರಿಸುವುದಲ್ಲದೆ ಬೇರೆ ಬೇರೆ ರಾಜ್ಯದಲ್ಲೂ ಪ್ರದೇಶಗಳಲ್ಲೂ ಕೂಡ ಆಚರಿಸುತ್ತಾರೆ. ಅದರಂತೆ ಇದೀಗ ಕನ್ನಡ ರಾಜ್ಯೋತ್ಸವವನ್ನು ದುಬೈನಲ್ಲಿ ಅದ್ದೂರಿಯಾಗಿ ಕನ್ನಡ ಚಿತ್ರರಂಗದ ನಟ, ನಟಿಯರು ಅದ್ದೂರಿಯಾಗಿ ದುಬೈನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ.
ಹೌದು, ಗಲ್ಫ್ ಕನ್ನಡ ಮೂವೀಸ್ ಮತ್ತು ದುಬೈ ಕನ್ನಡಿಗರ ಕೂಟ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಮ್ಯಾ, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ರಮ್ಯಾ, ಗೀತಾ ಶಿವರಾಜ್ ಕುಮಾರ್ , ಶಿವರಾಜ್ ಕುಮಾರ್ ಇತರೆ ಗಣ್ಯರು ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅವರಿಗೆ ಸನ್ಮಾನ ಮಾಡಲಾಯ್ತು.
ಕಾರ್ಯಕ್ರಮದ ಬಳಿಕ ರಮ್ಯಾ ಅವರು ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅವರುಗಳೊಟ್ಟಿಗೆ ದುಬೈನಲ್ಲಿ ಸುತ್ತಾಟ ನಡೆಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ-ವಿಜಯ್ ಜೊತೆ ಮದುವೆ ಇಂದು ಬಿಗ್ ಅನೌನ್ಸ್!
ಶಿವಣ್ಣ ಮತ್ತು ಗೀತಕ್ಕ ಅವರೊಂದಿಗೆ ಕಳೆದ ಕ್ಷಣಗಳು ನನ್ನ ಅತ್ಯುತ್ತಮ ಕ್ಷಣಗಳು ಇಲ್ಲಿವೆ. ಅವರ ಪ್ರೀತಿ, ವಾತ್ಸಲ್ಯ, ಸರಳತೆ ಮತ್ತು ಹಾಸ್ಯಪ್ರಜ್ಞೆ ನನ್ನ ಪ್ರವಾಸವನ್ನು ನಿಜವಾಗಿಯೂ ಸ್ಮರಣೀಯವಾಗಿಸಿತು. ನನ್ನ ನೆಚ್ಚಿನ ದಂಪತಿಗಳು ಇವರು ಎಂದಿದ್ದಾರೆ ರಮ್ಯಾ.

