ಶಹಾಪುರ: ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಒಂದಷ್ಟು ಖಾತೆಗಳು ಬದಲಾವಣೆಗೊಳ್ಳಲಿವೆ ಎನ್ನುವ ಸುದ್ದಿ ರಾಜಕೀಯ ರಂಗದಲ್ಲಿ ಹರಿದಾಡುತ್ತಿದ್ದು, ಸದಾ ಜನಪರ ಕೆಲಸದಲ್ಲಿ ತೊಡಗಿರುವ ಹಿರಿಯ ರಾಜಕಾರಣಿಗಳಾದ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಡಿಸಿಎಂ ಖಾತೆ ನೀಡಬೇಕು ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗುರು ಬಾಣತಿಹಾಳ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕೆ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧೀ ಅವರಿಗೆ ಮನವಿ ಮಾಡಿರುವ ಅವರು, ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಪ್ರತಿ ಬಾರಿಯ ಹೆಚ್ಚು ಶ್ರಮ ವಹಿಸಿ ಕಾಂಗ್ರೆಸ್ ಗೆಲುವಿನಲ್ಲಿ ದರ್ಶನಾಪುರ ಅವರ ಪ್ರಭಾವ ಸಾಕಷ್ಟಿದೆ.
ಇನ್ನೂ ಯಾವುದೇ ವಿಷಯವಿದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ. ಜಿಲ್ಲೇಯ ಉದ್ದಗಲಕ್ಕೂ ಪಕ್ಷದ ಮುಖಂಡರು, ಕಾರ್ಯಕರ್ತರ ವಿಶ್ವಾಸ ಗಳಿಸಿರುವ ಅವರು ಅತ್ಯಂತ ಚಾಣಕ್ಷ ನಾಯಕರಾಗಿದ್ದಾರೆ. ತಮ್ಮ 40 ವರ್ಷದ ರಾಜಕೀಯ ಇತಿಹಾಸದಲ್ಲಿ ಪ್ರತಿ ಚುನಾವಣೆಯಲ್ಲಿ ಎಲ್ಲಾ ಕಡೆಯೂ ಸಂಚರಿಸಿ ಕಾಂಗ್ರೆಸ್ ಗೆಲುವಿಗೆ ಮಹತ್ವದ ಪಾತ್ರ ವಹಿಸಿದ್ದಾರೆ.
ಹಿರಿಯ ಅನುಭವಿ ರಾಜಕಾರಣಿ ದರ್ಶನಾಪುರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಈ ಭಾಗದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ. ಮತ್ತು ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಿಗೆ ಅಭಿವೃದ್ದಿ ಕಾರ್ಯಗಳಿಗೆ ಪೂರಕವಾಗಲಿದೆ. ಇದೇ ಅಂಶವನ್ನು ಇಟ್ಟುಕೊಂಡು ದರ್ಶನಾಪುರ ಅವರಿಗೆ ಉನ್ನತ ಹುದ್ದೆ ಖಾತೆಯನ್ನು ವಹಿಸಲು ಸಿದ್ದರಾಮಯ್ಯ ಸಹ ಒಲವು ತೋರಬೇಕು ಎಂದು ಮನವಿ ಮಾಡಿದ್ದಾರೆ.
