ಬೆಂಗಳೂರು: ಬಿಗ್ ಬಾಸ್ ನ ಮಾಜಿ ಸ್ಪರ್ಧೆ ನಟ ಉಗ್ರಂ ಮಂಜು ಅವರು ಹಲವಾರು ವರ್ಷಗಳಿಂದ ಮದುವೆಯಾಗದೆ ಹಾಗೆ ಇದ್ದರು. ಆದರೆ ಇದೀಗ ಉಗ್ರಂ ಮಂಜು ಅವರ ಬದುಕಿನಲ್ಲಿ ಹೊಸ ತಂಗಾಳಿ ಬೀಸಿದಂತಾಗಿದೆ.
ಹೌದು, ನಟ ಉಗ್ರಂ ಮಂಜು ಅವರು ಇತ್ತೀಚಿಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಂಧ್ಯಾ ಎಂಬ ಯುವತಿಯೊಂದಿಗೆ ಉಗ್ರಂ ಮಂಜು ಅವರು ಸ್ನೇಹಿತರು ಹಾಗೂ ಕುಟುಂಬದ ಸಮ್ಮುಖದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಅವರು, “ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ… ದೇವರ ಕೃಪೆ, ಕುಟುಂಬದ ಆಶೀರ್ವಾದದೊಂದಿಗೆ ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ,” ಎಂದು ಮಂಜು ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಸಂಧ್ಯಾ ಅವರು ಸ್ಪರ್ಷ್ ಆಸ್ಪತ್ರೆಯಲ್ಲಿ ಟ್ರಾನ್ಸ್ಪ್ಲಾಂಟ್ ಕೋರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದು, ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದಾರೆ. ಅವರ ಹಲವು ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ‘ಮಾರ್ಕ್’ ಟೀಸರ್ ರಿಲೀಸ್ ; ಕಿಚ್ಚನ ಅಬ್ಬರಕ್ಕೆ ಫಿದಾ ಆದ ಅಭಿಮಾನಿಗಳು
ಸಂಧ್ಯಾ ಮತ್ತು ಮಂಜು ಅವರ ವಿವಾಹ ಜನವರಿ ತಿಂಗಳಲ್ಲಿ ನೆರವೇರಲಿದೆ ಎಂದು ತಿಳಿದುಬಂದಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮಂಜುಗೆ ಅಭಿನಂದನೆಗಳ ಸುರಿಮಳೆಗೊಳಿಸುತ್ತಿದ್ದಾರೆ.
