ಬೆಂಗಳೂರು: ಇಂದು HSR ಲೇಔಟ್ನ ಅನಿಲ್ ಗೌಡ ಅವರು, ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷ ನಾಯಕರಾದ ಆರ್. ಅಶೋಕ್ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಗೆ ಪುನಃ ಸೇರ್ಪಡೆಗೊಂಡರು.
ಬೊಮ್ಮನಹಳ್ಳಿ ಕ್ಷೇತ್ರದ ಜನಪ್ರಿಯ ಶಾಸಕರಾದ ಸತೀಶ್ ರೆಡ್ಡಿ ಅವರ ಸರ್ವತೋಮುಖ ಅಭಿವೃದ್ಧಿ ಮತ್ತು ಜನಪರ ಕಾರ್ಯದಿಂದ ಪ್ರೇರಿತರಾಗಿ, ದೃಢನಿಶ್ಚಯದೊಂದಿಗೆ ಅವರು ಮತ್ತೆ ಬಿಜೆಪಿ ಕುಟುಂಬದ ಭಾಗರಾಗಿರುವುದು ಸಂತಸದ ವಿಷಯ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದರು. ಇದನ್ನೂ ಓದಿ: ಕನ್ನಡ ನಮ್ಮ ಆತ್ಮ: ಸತೀಶ್ ರೆಡ್ಡಿ
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರವಿ ರವರು, ಎಂ.ವಿ. ನಾಗೇಂದ್ರ ರವರು ಹಾಗೂ ಹಲವು ನಾಯಕರೂ ಉಪಸ್ಥಿತರಿದ್ದರು.
