Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಎಂ.ಶ್ರೀನಿವಾಸ್ ಅವರ ಸಾಧನೆ ಮುಂದಿನ ಪೀಳಿಗೆಗೆ ತಲುಪಬೇಕು: ಶಾಸಕ ಎಂ.ಕೃಷ್ಣಪ್ಪ
  • Bangalore
  • Politics
  • State

ಎಂ.ಶ್ರೀನಿವಾಸ್ ಅವರ ಸಾಧನೆ ಮುಂದಿನ ಪೀಳಿಗೆಗೆ ತಲುಪಬೇಕು: ಶಾಸಕ ಎಂ.ಕೃಷ್ಣಪ್ಪ

Praja Vahini October 30, 2025
WhatsApp Image 2025-10-30 at 14.08.23
Spread the love

ಬೆಂಗಳೂರು ದಕ್ಷಿಣ: ಮಾಜಿ ಲೋಕಸಭಾ ಸದಸ್ಯರು ಹಾಗೂ ಮಾಜಿ ಶಾಸಕರಾದ ದಿ.ಎಂ.ಶ್ರೀನಿವಾಸ್ ಅವರ ಸಾಧನೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸದುದ್ದೇಶದಿಂದ ಪುತ್ಥಳಿ ಅನಾವರಣ ಮಾಡಲಾಗಿದೆ ಎಂದು ಶಾಸಕ ಎಂ.ಕೃಷ್ಣಪ್ಪ ತಿಳಿಸಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉತ್ತರಹಳ್ಳಿ ಸರ್ಕಲ್ ನಲ್ಲಿರುವ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹೆಬ್ಬಾಗಿಲ ಬಳಿ ದಿ.ಎಂ.ಶ್ರೀನಿವಾಸ್ ಪುತ್ಥಳಿ ಅನಾವರಣ ನೆರವೇರಿಸಿ ವೇದಿಕೆ ಕಾರ್ಯಕ್ರಮದಲ್ಲಿ ಎಂ.ಶ್ರೀನಿವಾಸ್ ಜೀವನಾಧಾರಿತ ಸಾರ್ಥಕಶ್ರೀ ಪುಸ್ತಕ ಬಿಡುಗಡೆಗೊಳಿಸಿ, ನೂರಾರು ಬಡ ಮಹಿಳೆಯರಿಗೆ ಸೀರೆ ಬೆಡ್ ಶೀಟ್ ಹಾಗೂ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದರು.

ಅನೇಕ ದೇವಾಲಯಗಳು ಹಾಗೂ ಸರ್ಕಾರಿ ಶಾಲೆಗಳ ನಿರ್ಮಾತೃ, ಅಭಿವೃದ್ಧಿ ವಿಚಾರದಲ್ಲಿ ಮುಂಚೂಣಿ, ಉತ್ತರಹಳ್ಳಿ ವೀರಾಂಜನೇಯ ದೇವಾಲಯಕ್ಕೆ ಚಿನ್ನ ಲೇಪಿತ ರಥೋತ್ಸವದ ಕರ್ತೃ, ಹಳ್ಳಿಯಿಂದ ಡೆಲ್ಲಿ ವರೆಗೂ ಉತ್ತರಹಳ್ಳಿ ಹೆಸರು ಚಿರಸ್ಥಾಯಿಯಾಗಿಸಿದ ಕೀರ್ತಿ ದಿ.ಎಂ.ಶ್ರೀನಿವಾಸ್ ಅವರಿಗೆ ಸಲ್ಲುತ್ತದೆ ಎಂದರು.

ದಿ.ಎಂ.ಶ್ರೀನಿವಾಸ್ ಅವರ ಧರ್ಮಪತ್ನಿ ರತ್ನಮ್ಮ ಶ್ರೀನಿವಾಸ್ ಮಾತನಾಡಿ, ಬಡವರ ಬಗ್ಗೆ ಅತಿ ಕಾಳಜಿ ಹೊಂದಿದ್ದ ಶ್ರೀನಿವಾಸ್ ಅವರು ದೈಹಿಕವಾಗಿ ನಮ್ಮನಗಲಿದ್ದರೂ, ಮಾನಸಿಕವಾಗಿ ಎಲ್ಲರೂ ಜೊತೆಯಲ್ಲಿ ಇದ್ದಾರೆ. ಕುಟುಂಬ ವರ್ಗಕ್ಕೆ ಸಮಯ‌ ಮೀಸಲಿಡದೆ ಸಮಾಜಕ್ಕಾಗಿ ಜೀವನವನ್ನೆ ಮುಡಿಪಾಗಿಟ್ಟಿದ್ದರು ಎಂದರು. ಇದನ್ನೂ ಓದಿ: ಹೆಡಗಾಪೂರ ಪಿಡಿಒ ಕುಮಾರಿ ಮಹಾಲಕ್ಷ್ಮಿ ಅಮಾನತ್ತು

ಯಾದಾಳಂ ಮಧುಸೂದನ್, ಪಾಲಿಕೆ ಮಾಜಿ ಸದಸ್ಯರಾದ ಹನುಮಂತಯ್ಯ, ರಮೇಶ್ ರಾಜು,ಮುಖಂಡರಾದ ವಿಜಯ್ ಕುಮಾರ್ ಬಾಬು, ಗಂಗಣ್ಣ, ರತ್ನಮ್ಮ ಶ್ರೀನಿವಾಸ್ ಮತ್ತು ಕುಟುಂಬ ವರ್ಗ ಸೇರಿದಂತೆ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಚಿತ್ರ : ಯಾದಾಳಂ ಮಧುಸೂದನ್, ಪಾಲಿಕೆ ಮಾಜಿ ಸದಸ್ಯರಾದ ಹನುಮಂತಯ್ಯ, ರಮೇಶ್ ರಾಜು,ಮುಖಂಡರಾದ ವಿಜಯ್ ಕುಮಾರ್ ಬಾಬು, ಗಂಗಣ್ಣ, ರತ್ನಮ್ಮ ಶ್ರೀನಿವಾಸ್ ಮತ್ತು ಕುಟುಂಬ ವರ್ಗ ಸೇರಿದಂತೆ ಕ್ಷೇತ್ರದ ಪಾಲಿಕೆ ಮಾಜಿ ಸದಸ್ಯರು   ಮುಖಂಡರು,ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

About the Author

Praja Vahini

Editor

View All Posts

Spread the love

Post navigation

Previous: ಹೆಡಗಾಪೂರ ಪಿಡಿಒ ಕುಮಾರಿ ಮಹಾಲಕ್ಷ್ಮಿ ಅಮಾನತ್ತು
Next: ಕರ್ನಾಟಕ ಮಾದರ ಮಹಾಸಭೆಯ ಪುನರ್‌ ರಚನೆ: ಮುನಿಯಪ್ಪ

Views:

20

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.