ಬೆಂಗಳೂರು: ಅಭಿವೃದ್ಧಿ ಕಾರ್ಯಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಗರ ಪಾಲಿಕೆಗಳ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ಕಛೇರಿಯಲ್ಲಿ ಇಂದು (ಶುಕ್ರವಾರ ಅ. 17) ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಯಾವುದಾದರು ಅಭಿವೃದ್ಧಿ ಕಾಮಗಾರಿಗಳು 2 ಅಥವಾ ಹೆಚ್ಚು ನಗರ ಪಾಲಿಕೆಗಳ ವ್ಯಾಪ್ತಿಯನ್ನು ಒಳಗೊಂಡಿದ್ದರೆ, ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ಕಾಲಮಿತಿಯೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳ್ಳುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ನೆಫ್ರೋ ಯೂರೋಲಜಿ ಸಂಸ್ಥೆಗೆ ರಾಷ್ಟ್ರೀಯ ಮಾನ್ಯತೆ
ಅಧಿಕಾರಿಗಳಿಗೆ ಸಮರ್ಪಕ ಕಾರ್ಯ ಹಂಚಿಕೆ
ನಗರ ಪಾಲಿಕೆ ಮಟ್ಟದಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಮರ್ಪಕ ಕಾರ್ಯವನ್ನು ಹಂಚಿಕೆ ಮಾಡಬೇಕು. ಪ್ರತಿ ಅಧಿಕಾರಿಗೆ ಜವಾಬ್ದಾರಿಯನ್ನು ನಿಗದಿಪಡಿಸಿ, ಪ್ರಗತಿ ವರದಿ ಹಾಗೂ ಕಾರ್ಯನಿರ್ವಹಣಾ ಮಾಹಿತಿಯನ್ನು ನಿಯಮಿತವಾಗಿ ಸಲ್ಲಿಸುವ ವ್ಯವಸ್ಥೆ ರೂಪಿಸಬೇಕೆಂದು ಸೂಚಿಸಿದರು.
ಅಗತ್ಯ ಮಾನವ ಸಂಪನ್ಮೂಲದ ಕುರಿತು ಮಾಹಿತಿ ನೀಡಿ
ನಗರ ಪಾಲಿಕೆ ಕಛೇರಿಗಳು ಹಾಗೂ ಉಪವಿಭಾಗಗಳಲ್ಲಿ ಮಾನವ ಸಂಪನ್ಮೂಲದ ಕೊರತೆ ಇರುವ ಸ್ಥಳಗಳನ್ನು ಗುರುತಿಸಿ, ಸಂಬಂಧಿತ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡುವ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಿದರು.
ಇ-ಆಫೀಸ್ ನಲ್ಲಿ ಕಡತ ವಿಲೇವಾರಿಗೆ ಕ್ರಮ
ನಗರ ಪಾಲಿಕೆ ಮಟ್ಟದಲ್ಲಿ ಇ-ಆಫೀಸ್ ನಲ್ಲಿಯೇ ಕಡತ ವಿಲೇವಾರಿಗೆ ಕ್ರಮವಹಿಸಬೇಕು. ಕಾಗದ ಸ್ವರೂಪದ ದಾಖಲೆಗಳನ್ನು (Physical Documents) ಕ್ರಮೇಣ ಡಿಜಿಟಲ್ ಸ್ವರೂಪಕ್ಕೆ (Digital Mode) ಪರಿವರ್ತಿಸಿ, ಎಲ್ಲಾ ಪ್ರಸ್ತಾವನೆಗಳು, ಅನುಮೋದನೆಗಳು ಮತ್ತು ಫೈಲ್ ಚಲಾವಣೆಗಳನ್ನು ಇ-ಆಫೀಸ್ ಮೂಲಕಲೇ ನಡೆಸುವಂತೆ ಸೂಚಿಸಿದರು.
