ಬೆಂಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಅನಾರೋಗ್ಯದಲ್ಲಿ ಏರುಪೇರಾಗಿ ಹಲವಾರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇತ್ತೀಚಿಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಈಗಾಗಲೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ರಾಜಕೀಯ ವ್ಯಕ್ತಿ ಸೇರಿದಂತೆ ಸಿನಿಮಾ ರಂಗದ ವ್ಯಕ್ತಿಗಳು ಆರೋಗ್ಯವನ್ನು ವಿತರಿಸುತ್ತಿದ್ದಾರೆ. ಇದನ್ನೂ ಓದಿ: ಮುತ್ತಿನ ರವಿಕೆಯಲ್ಲಿ ಕಂಗೊಳಿಸುತ್ತಿರುವ ಪ್ರಣೀತಾ
ಅದರಂತೆ ನಟ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಅವರು ಕೂಡ ನಿನ್ನೆ (ಗುರುವಾರ ಅಕ್ಟೋಬರ್ 16) ರಂದು ಹೆಚ್ ಡಿ ದೇವೇಗೌಡ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಇನ್ನು ಕಾಂತಾರ ಚಾಪ್ಟರ್ 1 ಸಕ್ಸಸ್ ನಲ್ಲಿರುವ ರಿಷಬ್ ಶೆಟ್ಟಿ ಅವರಿಗೆ ಹೆಚ್ ಡಿ ದೇವೇಗೌಡ ಅವರು ಆಶೀರ್ವಾದ ಮಾಡಿದ್ದಾರೆ.
