ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ಜೀವನ ಚರಿತ್ರೆಯ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಪುಸ್ತಕದಲ್ಲಿ ಡಿಕೆ ಶಿವಕುಮಾರ್ ರವರು ಬಾಲ್ಯ, ಶೈಕ್ಷಣಿಕ ದಿನಗಳು ಹಾಗೂ ರಾಜಕೀಯ ಬೆಳವಣಿಗೆಯ ಹಾದಿಯನ್ನು ಪರಿಚಯಿಸುವ ಮೂಲಕ “A Symbol of Loyalty D K Shivakumar” ಕೃತಿಯನ್ನು ನಿನ್ನೆ (ಬುಧವಾರ ಅ. 15) ಲೋಕಾರ್ಪಣೆ ಮಾಡಲಾಗಿದೆ.
ಕನ್ನಡ ಚಿತ್ರರಂಗದ ಯುವ ನಿರ್ದೇಶಕರಾದ ಕೆ.ಎಂ. ರಘು ಅವರು ಈ ಕೃತಿಯನ್ನು ರಚಿಸಿದ್ದು, ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ್ ಕಂಬಾರರು ಈ ಕೃತಿಯನ್ನು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಸಿಎಂ, ಡಿಸಿಎಂ ಮನೆಗೆ ಬಾಂಬ್ ಬೆದರಿಕೆ!
ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಈ ಪುಸ್ತಕದಲ್ಲಿ ನನ್ನ ಬಾಲ್ಯ, ಶಿಕ್ಷಣ, ರಾಜಕೀಯದಲ್ಲಿ ನಡೆದು ಬಂದ ಹಾದಿ, ರಾಜಕೀಯ ರಂಗದಲ್ಲಿ ಕಷ್ಟ, ನಷ್ಟ ಹೀಗೆ ಹಲವಾರು ರೀತಿಯ ಸವಿ ನೆನಪುಗಳು ಈ ಪುಸ್ತಕದಲ್ಲಿವೆ ಎಂದರು. ನನ್ನ ಜೀವನದ ಹಾದಿಗೆ ಒಂದು ಅರ್ಥ ತಂದಿದೆ. ನಿಮ್ಮೆಲ್ಲರ ಈ ಪ್ರೀತಿ ನನಗೆ ಶ್ರೀರಕ್ಷೆ ಎಂದು ಹೇಳದರು.
