ಬೆಂಗಳೂರು: ಸಿನಿಮಾ ರಂಗದಲ್ಲಿರುವ ಅದೆಷ್ಟೋ ಕಲಾವಿದರಿಗೆ ಕ್ಯಾನ್ಸರ್ ಸಮಸ್ಯೆ ಕಾಡುತ್ತಿರುವುದು ಸರ್ವೇಸಾಮಾನ್ಯ. ಅದರಂತೆ ಇದೀಗ ಕನ್ನಡ ಚಿತ್ರರಂಗದ ಹಿರಿಯ ನಟ ಉಮೇಶ್ ಅವರಿಗೂ ಕೂಡ ಲಿವರ್ ಕ್ಯಾನ್ಸರ್ ಇದೆ ಎಂಬ ವಿಚಾರ ತಿಳಿದು ಬಂದಿದೆ.
ಇತ್ತೀಚಿಗಷ್ಟೇ ಉಮೇಶ್ ರವರು ಜಾರಿ ಬಿದ್ದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು (ಅಕ್ಟೋಬರ್ 11) ಸರ್ಜರಿ ಮಾಡುವ ಪ್ಲ್ಯಾನ್ ಇತ್ತು. ಈ ವೇಳೆ ಲಿವರ್ನಲ್ಲಿ ಹಾನಿ ಉಂಟುಮಾಡುವ ಗಡ್ಡೆ ಇರುವ ವಿಚಾರ ಗೊತ್ತಾಗಿದೆ. ಈ ಬಗ್ಗೆ ವೈದ್ಯರು ಅವರ ಕುಟುಂಬದ ಜೊತೆ ಚರ್ಚೆ ಮಾಡಿದ್ದಾರೆ.
ಸದ್ಯ ವೈದ್ಯರ ಪರೀಕ್ಷೆ ಪ್ರಕಾರ ಲಿವರ್ನಲ್ಲಿ ಕ್ಯಾನ್ಸರ್ ಉಂಟಾಗಿದ್ದು, ಅದು ಬೇರೆ ಅಂಗಗಳಿಗೆ ಸ್ಪ್ರೆಡ್ ಆಗಿದೆ. ‘ಉಮೇಶ್ ಅವರು ನೋಡಲು ಆರೋಗ್ಯವಾಗಿಯೇ ಕಾಣಿಸಿದ್ದಾರೆ. ಆದರೆ, ಕ್ಯಾನ್ಸರ್ ಇದೆ. ಇದನ್ನು ಖಚಿತಪಡಿಸಲು ಕೆಲವು ಟೆಸ್ಟ್ ಮಾಡಬೇಕಿದೆ. ಲಿವರ್ ಒಳಗೆ ಇರೋ ಗಡ್ಡೆಯನ್ನು ತೆಗೆದು ಪರೀಕ್ಷೆಗೆ ಕಳುಹಿಸಬೇಕಿದೆ’ ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಜಡ್ಜ್ಗೆ ದರ್ಶನ್ ಮನವಿ ಮಾಡಿದ್ದೇನು..?
ಸದ್ಯ ವೈದ್ಯರು ಪ್ರಾಥಮಿಕ ಆರೋಗ್ಯ ತಪಾಸಣೆಯಿಂದ ಬಂದ ಮಾಹಿತಿಗಳನ್ನು ಇಟ್ಟುಕೊಂಡು ಉಮೇಶ್ಗೆ ಕ್ಯಾನ್ಸರ್ ಇದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸಂಪೂರ್ಣ ಪರೀಕ್ಷೆ ಬಳಿಕ ಅಸಲಿ ವಿಚಾರ ಏನು ಎಂಬ ವಿಚಾರ ರಿವೀಲ್ ಆಗಲಿದೆ.
