ಬೆಂಗಳೂರು: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇಂದು ಬೆಳ್ಳ ಬೆಳಗ್ಗೆ ಸರ್ವಜನಿಕರ ಜೊತೆ ಸಾಮಾನ್ಯರಂತೆ ಹೆಜ್ಜೆ ಹಾಕಿ ಸಾರ್ವಜನಿಕರ ಅಳಲನ್ನು ಸ್ವೀಕರಿಸಿದ್ದಾರೆ
ಯೆಸ್..ಬೆಂಗಳೂರಿನ ಉದ್ಯಾನವನಗಳಲ್ಲಿ ನಾಗರೀಕರು ಹಾಗೂ ವಾಯು ವಿಹಾರಿಗಳ ಧ್ವನಿ ಆಲಿಸಲು ವಿನೂತನವಾಗಿ ರೂಪಿಸಿರುವ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇಂದು (ಶನಿವಾರ ಅ. 11) ಬೆಳಗ್ಗೆ ಲಾಲ್ ಬಾಗ್ ಉದ್ಯಾನದಲ್ಲಿ ಜನಸಾಮಾನ್ಯರ ಜತೆ ಹೆಜ್ಜೆ ಹಾಕಿದರು. ಇದನ್ನೂ ಓದಿ: ಪತ್ರಕರ್ತ ಚಿಕಿತ್ಸೆಗೆ ಜಿಬಿಎದಲ್ಲೂ ಅನುದಾನ: ಡಿಕೆಶಿ
ಈ ಸಂದರ್ಭದಲ್ಲಿ ಸಾರ್ವಜನಿಕರ ಅಳಲನ್ನು ಸ್ವೀಕರಿಸಿ ಶೀಘ್ರದಲ್ಲೇ ನಿಮ್ಮ ಸಮಸ್ಯೆಗಳ ಪರಿಹಾರದ ಭರವಸೆ ನೀಡಿದರು.
