ರಾಮನಗರ: ಕನ್ನಡ ಬಿಗ್ ಬಾಸ್ ಸೀಸನ್ 12 ಎಲ್ಲಾ ವಿಘ್ನಗಳನ್ನು ದಾಟಿ ಮತ್ತೆ ಇದೀಗ ರೀ ಓಪನ್ ಆಗಿ ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಎಂದಿನಂತೆ ಇಂದಿನಿಂದ ಬಿಗ್ ಬಾಸ್ ಶೋ ಪ್ರಾರಂಭವಾಗಿದ್ದು ವಿಕ್ಷಕರು ಹಾಗೂ ಕಂಟೆಸ್ಟೆಂಟ್ಗಳು ಖುಷಿಯಾಗಿದ್ದಾರೆ.
ಇನ್ನು ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೋಗೆ ಸರ್ಕಾರವು ಬಿಗ್ ಬಾಸ್ ಪ್ರಾರಂಭಿಸಲು ಅನುಮತಿ ನೀಡಿರುವುದರಿಂದ ಇದೀಗ ಕನ್ನಡ ಪರ ಹೋರಾಟಗಾರರು ಜಾಲಿವುಡ್ ಸ್ಟುಡಿಯೋ ಮುಂದುಗಡೆ ಪ್ರತಿಭಟನೆ ನಡೆಸಿದ್ದಾರೆ.
ಉಪಮುಖ್ಯಮಂತ್ರಿ ಡಿಕೆಶಿ ಜಾಲಿವುಡ್ ಜೊತೆ ಡೀಲ್ ಮಾಡಿಕೊಂಡು ಓಪನ್ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಕಿಡಿಕಾರಿದ ಹೋರಾಟಗಾರರು, ಗೇಟ್ ಮೇಲೆ ಹತ್ತಿ ಹೈಡ್ರಾಮ ಸೃಷ್ಟಿಸಿದರು. ಕಾಂಪೌಂಡ್ ಹಾರಿ ಒಳನುಗ್ಗಲು ಯತ್ನಿಸಿದರು. ಇದನ್ನೂ ಓದಿ: ಔತಣಕೂಟ ಆಯೋಜಿಸಿರುವುದರಲ್ಲಿ ತಪ್ಪೇನಿದೆ?: ಡಿ.ಕೆ. ಶಿವಕುಮಾರ್
ಈ ವೇಳೆ ಜಾಲಿವುಡ್ ಸೆಕ್ಯುರಿಟಿ ಹಾಗೂ ಹೋರಾಟಗಾರರ ನಡುವೆ ವಾಗ್ವಾದ ನಡೆದಿದ್ದು, ಕೂಡಲೇ ಜಾಲಿವುಡ್ ಸಂಪೂರ್ಣ ಸ್ಥಗಿತ ಮಾಡುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಬಿಡದಿ ಪೊಲೀಸರು ಆಗಮಿಸಿ ಪ್ರತಿಭಟನಾಕಾರರನ್ನ ವಶಕ್ಕೆ ಪಡೆದರು. ಕನ್ನಡಪರ ಹೋರಾಟಗಾರರನ್ನು ಬಂಧಿಸಿ ಜೀಪ್ನಲ್ಲಿ ಕರೆದೊಯ್ದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
