ಹಾಸನ: ವರ್ಷಕ್ಕೆ ಕೇವಲ ಒಮ್ಮೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸುವ ಹಾಸನಾಂಬೆ ದೇವಸ್ಥಾನ ದರ್ಶನ ಇಂದಿನಿಂದ ನಡೆಯಲಿದ್ದು, ನಾಡಿನ ಶಕ್ತಿ ದೇವತೆ ಹಾಸನಾಂಬೆಯ ದರ್ಶನ ಉತ್ಸವ ಇಂದು ನಡೆಯುತ್ತಿದ್ದು ಇಂದು (ಗುರುವಾರ ಅಕ್ಟೋಬರ್ 9) ರಂದು ಹಾಸನಾಂಬೆಯ ಗರ್ಭಗುಡಿಯ ಬಾಗಿಲನ್ನು ಸುಮಾರು 12 ಗಂಟೆಗೆ ತೆರೆಯಲಾಗುತ್ತದೆ. ಹಾಸನಾಂಬೆಯ ದೇವಸ್ಥಾನವನ್ನು ವಿಧ ವಿಧ ಹೂವುಗಳಿಂದ ಅಲಂಕಾರ ಮಾಡಿ, ಕಂಗೊಳಿಸಲಾಗುತ್ತಿದೆ.
ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಸ್ವಯುಜ ಮಾಸದಲ್ಲಿ ಬರುವಂತಹ ಮೊದಲ ಗುರುವಾರದಂದು ಹಾಸನಾಂಬೆಯ ಗರ್ಭಗುಡಿಯನ್ನು ತೆರೆಯಲಾಗುತ್ತದೆ. ಈ ವರ್ಷ ಒಟ್ಟು 15 ದಿನಗಳ ಕಾಲ ಹಾಸನಾಂಬೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಮೊದಲ ದಿನ ಹಾಗೂ ಕೊನೆಯ ದಿನದಂದು ಭಕ್ತರಿಗೆ ದರ್ಶನ ಬಿಟ್ಟು ಇನ್ನುಳಿದ 13 ದಿನಗಳ ಕಾಲ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ರೀ ಓಪನ್ ಗೆ ಕಿಚ್ಚನ ಕಸರತ್ತೆನು?
ಜಿಲ್ಲಾಡಳಿತವು ಭಕ್ತರ ದರ್ಶನಕ್ಕಾಗಿ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ದೇವಾಲಯದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಹೂವಿನ ಅಲಂಕಾರದಿಂದ ಆಕರ್ಷಣೀಯವಾಗಿ ಸಿಂಗರಿಸಲಾಗಿದೆ. ಸಿದ್ಧೇಶ್ವರ ಸ್ವಾಮಿ ದೇವಾಲಯದಿಂದ ಆರಂಭವಾಗಿ ಇಡೀ ದೇಗುಲದ ಆವರಣ ಹಬ್ಬದ ವಾತಾವರಣ ಸೃಷ್ಟಿಸಿದೆ.
