ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 11 ಸೀಸನ್ ಗಳನ್ನು ಈಗಾಗಲೇ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು ಮತ್ತೆ ಇದೀಗ 12ನೆಯ ಸೀಸನ್ ಕೂಡ ನಡೆಯುತ್ತಿದೆ. ಈ ಬಾರಿ 12ನೇ ಸೀಸನ್ನಲ್ಲಿ ಡಿಫ್ರೆಂಟ್ ಆಗಿ ಎಲ್ಲಾ ಟಾಸ್ ಗಳನ್ನು ನೀಡುವುದರ ಜೊತೆಗೆ ಬಿಗ್ ಬಾಸ್ ಮನೆಯನ್ನು ಕೂಡ ಡಿಫ್ರೆಂಟ್ ರೀತಿಯಲ್ಲಿ ನಿರ್ಮಿಸಲಾಗಿದೆ.
ಇನ್ನು ಎಲ್ಲ ವಿಘ್ನಗಳನ್ನು ದಾಟಿ ಬಿಗ್ ಬಾಸ್ ಪ್ರಾರಂಭಿಸಿ ಈಗಾಗಲೇ ಒಂದು ವಾರ ಕಳೆದಿದ್ದು, ಒಂದು ವಾರದಲ್ಲಿಯೇ ಬಿಗ್ ಬಾಸ್ ಗೆ ಇದೀಗ ಕಂಟಕ ಶುರುವಾಗಿದ್ದು, ಬಿಗ್ ಬಾಸ್ ಮನೆಗೆ ಸೇರಿದಂತೆ ಜಾಲಿವುಡ್ ಸ್ಟುಡಿಯೋಗೂ ಕೂಡ ಮಾಲಿನ್ಯ ನಿಯಂತ್ರಣ ಮಂಡಳಿ ಲಾಕ್ ಜಡದಿದ್ದಾರೆ. ಇದನ್ನೂ ಓದಿ: ಬಿಗ್ಬಾಸ್ 12ಕ್ಕೆ ಬಿಗ್ ರಿಲೀಫ್
ಬಿಗ್ ಬಾಸ್ ಮನೆಗೆ ಬೀಗ ಜಡಿದ ಬಳಿಕ ಅಲ್ಲಿದ್ದ ಸ್ಪರ್ಧಿಗಳನ್ನ ಈಗಲ್ ಟನ್ ರೆಸಾರ್ಟ್ ಗೆ ಸ್ಥಳಾಂತರ ಮಾಡಲಾಯಿತು. ರಾತ್ರಿಯಿಂದಲೇ ವಾಸ್ತವ್ಯ ಹೂಡಿರುವ ಸ್ಪರ್ಧಿಗಳು ಬೆಳಗ್ಗೆ ರೆಸಾರ್ಟ್ ಬಾಲ್ಕನಿಯಲ್ಲಿ ನಿಂತು ಮಾತಾಡಿಕೊಳ್ಳುತ್ತಿದ್ದರು. ಈ ಘಟನೆಯ ಅರಿವಿಲ್ಲದೇ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ. ಜೊತೆಗೆ ಬಿಗ್ ಬಾಸ್ ಸ್ಪರ್ಧಿಗಳಾದ ಧನುಷ್ ಗೌಡ ಹಾಗೂ ಅಭಿಷೇಕ್ ಧೂಮಪಾನ ಮಾಡುತ್ತಾ ಮಾತ್ನಾಡುತ್ತಾ ನಿಂತಿದ್ದಾರೆ.
