ಬೆಂಗಳೂರು: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಕಾಂತರಾ ಚಾಪ್ಟರ್ 1 ಸಿನಿಮಾ ಇಂದು (ಗುರುವಾರ ಅ.02) ದೇಶದಾದ್ಯಂತ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ದೊಡ್ಡ ಪರದೆಗಳ ಮೇಲೆ ರಿಸೆಬ್ ಶೆಟ್ಟಿ ಅಬ್ಬರಿಸುತ್ತಿರುವುದನ್ನು ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.
ಹೌದು, ಹಲವು ಚಿತ್ರಮಂದಿರಗಳಲ್ಲಿ ಬೆಳಗ್ಗೆ 6:30ಕ್ಕೆ ಮೊದಲ ಶೋ ಆರಂಭವಾಗಿದೆ. ವೀರೇಶ್, ಸಂತೋಷ್ ಚಿತ್ರಮಂದಿರ ಹಾಗೂ ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ 6:30ಕ್ಕೆ ಮೊದಲ ಶೋ ಶುರುವಾಗಿದೆ. ಕರ್ನಾಟಕದಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ 1 ಸಿನಿಮಾ ಬಿಡುಗಡೆಯಾಗಿದೆ. ಮೊದಲ ದಿನ 2 ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಾಣಲಿದೆ. ಇದನ್ನೂ ಓದಿ: ನನ್ನ ಭಾಷೆ ಕನ್ನಡ, ನಾನು ಹೆಮ್ಮೆಯ ಕನ್ನಡಿಗ: ರಿಷಬ್ ಶೆಟ್ಟಿ
7,000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ಭಾರತ ಹಾಗೂ ಭಾರತದಾಚೆಗೂ ಸಿನಿಮಾ ಬಿಡುಗಡೆಯಾಗಲಿದೆ. ರಿಷಬ್ ಶೆಟ್ಟಿ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ತಮಿಳು ನಟ ಜಯರಾಂ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
