ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಹಾಗೂ ಆನ್ಲೈನ್ ಮೂಲಕ ವ್ಯವಹಾರ ನಡೆಸುತ್ತಿರುವುದರಿಂದ ಹ್ಯಾಕರ್ಗಳ ಹಾವಳಿ ಹೆಚ್ಚಾಗುತ್ತಿದೆ. ಯಾರದ್ದೋ ಮೊಬೈಲಿಗೆ ಲಿಂಕ್ ಅನ್ನು ಕಳಿಸಿ ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಹಣ ಬರುತ್ತದೆ ಹಾಗೂ ಇನ್ನಿತರ ಆಫರ್ ಗಳು ಸಿಗುತ್ತವೆ ಎಂದು ಹ್ಯಾಕರ್ ಗಳು ಜಾಣತನದಿಂದ ಮೊಬೈಲ್ ಹ್ಯಾಕ್ ಮಾಡಲು ಹೊಂಚು ಹಾಕುತ್ತಿದ್ದಾರೆ.
ಇನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಅವರಿಗೂ ಕೂಡ ಹ್ಯಾಕರ್ಗಳ ಕಾಟ ತಪ್ಪಿಲ್ಲ.
ಹೌದು, ನಟ ಉಪೇಂದ್ರ ಹಾಗೂ ಅವರ ಪತ್ನಿ, ಪ್ರಿಯಾಂಕ ಅವರ ಮೊಬೈಲ್ ಹ್ಯಾಕ್ ಆಗಿದೆ ಎಂದು ವಿಡಿಯೋ ಮಾಡುವ ಮೂಲಕ ದಂಪತಿಗಳಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ನಮ್ಮಿಬ್ಬರ ಫೋನ್ ಹ್ಯಾಕ್ ಆಗಿದೆ. ಯಾರಾದರೂ ನಮ್ಮ ಹೆಸರಲ್ಲಿ ಹಣ ಕೇಳಿದರೆ ಕೊಡಬೇಡಿ, ಅದಕ್ಕೂ ಮುನ್ನ ಅನೌನ್ಸ್ ಮಾಡ್ತಿದ್ದೇವೆ. ಮುಂದೆ ಪೊಲೀಸರಿಗೆ ದೂರನ್ನೂ ಕೊಡುತ್ತೇವೆ ಎಂದಿದ್ದಾರೆ ದಂಪತಿ
ಆನ್ಲೈನ್ನಲ್ಲಿ ವಸ್ತುವೊಂದನ್ನ ಪ್ರಿಯಾಂಕಾ ಆರ್ಡರ್ ಮಾಡಿದ್ರಂತೆ, ಬಳಿಕ ಹ್ಯಾಕರ್ ಒಬ್ಬ ಫೋನ್ ಮಾಡಿ ಹ್ಯಾಶ್ ಒತ್ತಿ, ಆ ನಂಬರ್, ಈ ನಂಬರ್ ಒತ್ತಿ ಎಂದು ಹೇಳಿ ಕನ್ಫ್ಯೂಸ್ ಮಾಡಿದ್ದಾರೆ. ಬಳಿಕ ಉಪ್ಪಿ ಮೊಬೈಲ್ನಿಂದಲೂ ಕಾಲ್ ಮಾಡಿದಾಗ ಅವರ ಫೋನ್ ಕೂಡ ಹ್ಯಾಕ್ ಆಗಿದೆ. ಹೀಗಾಗಿ ದೂರು ಕೊಡೋದಕ್ಕೂ ಮುನ್ನವೇ ವೀಡಿಯೋ ಮೂಲಕ ಎಲ್ಲರಿಗೂ ವಿಷಯ ತಲುಪಿಸಿದ್ದಾರೆ ಉಪೇಂದ್ರ ದಂಪತಿ.
