ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಭಾರಿ ಕುತೂಹಲ ಮೂಡಿಸುವಂತಹ ಮಾತುಗಳನ್ನು ಆಡುತ್ತಾರೆ.
ಕಳೆದ ಕೆಲವು ದಿನಗಳ ಹಿಂದೆ ವಿಧಾನಸೌಧದಲ್ಲಿ ಆರ್ ಎಸ್ ಎಸ್ ಗೀತೆ ಹಾಡುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದ ಡಿಕೆ ಶಿವಕುಮಾರ್ ಅವರು ಮತ್ತೆ ಇದೀಗ ಮೋದಿ..ಮೋದಿ ಎಂದು ಹೇಳುವ ಮೂಲಕ ಮತ್ತೆ ಇದೀಗ ವೈರಲ್ ಆಗುವ ಡೈಲಾಗ್ ಹೊಡೆದಿದ್ದಾರೆ.
ಹೌದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಬಸವನಗುಡಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸನ್ಮಾನ ಸ್ವೀಕರಿಸಿದ ನಂತರ ಕೆಲವರು ಮೋದಿ…ಮೋದಿ ಎಂದು ಕೂಗುತ್ತಿದ್ದರು ಇದಕ್ಕೆ ಪ್ರತ್ಯುತ್ತರವಾಗಿ ಡಿಕೆ ಶಿವಕುಮಾರ್ ಅವರು ನರೇಂದ್ರ ಮೋದಿಯವರನ್ನು ನೀವು ಕೇಳಿ ಅವರು ಡಿಕೆ..ಡಿಕೆ ಅಂತಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದೀಗ ಈ ಡೈಲಾಗು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲಾಗುತ್ತಿದೆ ಇದನ್ನೂ ಓದಿ: ಚುನಾವಣೆಗಳಲ್ಲಿ ಅಕ್ರಮ, ಮತಗಳ್ಳತನ ನಡೆಸುವುದರಲ್ಲಿ ನಿಷ್ಣಾತರಾದ ಕಾಂಗ್ರೆಸ್ಸಿಗರು: ಬಿವೈವಿ
