ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಕೋರಿ ಆದೇಶ ಹೊರಡಿಸಿರುವ ಬೆನ್ನೆಲೆ ನಟ ದರ್ಶನ್ ಹಾಗೂ ಏಳು ಜನ ಆರೋಪಿಗಳನ್ನು ಮತ್ತೆ ಜೈಲಿಗೆ ಕಳಿಸಲಾಗಿದೆ.
ಇನ್ನು ದರ್ಶನ್ ಹಾಗೂ ಪವಿತ್ರ ಗೌಡ ಪರಪ್ಪನ ಅಗ್ರಹಾರ ಜೈಲು ಸೆರಾವಾಸ ಅನುಭವಿಸುತ್ತಿದ್ದಾರೆ. ಕಳೆದ ಬಾರಿ ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಫೈವ್ ಸ್ಟಾರ್ ವ್ಯವಸ್ಥೆಯನ್ನು ನೀಡಲಾಗುತ್ತಿತ್ತು ಎಂಬ ಕಾರಣಕ್ಕೆ ಬಳ್ಳಾರಿ ಸೆಂಟ್ರಲ್ ಜೈಲ್ಗೆ ಕಳಿಸಲಾಗಿತ್ತು.
ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಜೈಲು ಸೇರವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರು ಮತ್ತೆ ಬಳ್ಳಾರಿ ಜೈಲಿಗೆ ಕಳಿಸಲಾಗುತ್ತದೆ ಎಂದು ಈಗಾಗಲೇ ತಿಳಿದು ಬಂದಿದ್ದು, ದರ್ಶನ್ ಗೆ ಮತ್ತೆ ಸೆಂಟ್ರಲ್ ಜೈಲಿಗೆ ಕಳಿಸುತ್ತಾರೆ ಅಥವಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗುತ್ತಾ ಎಂದು ಇಂದು ಕೋರ್ಟಿನಲ್ಲಿ ತೀರ್ಮಾನವಾಗಲಿದೆ. ಇದನ್ನೂ ಓದಿ: ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಬ್ಯಾಡ್ ಕಾಮೆಂಟ್ಸ್; ದೂರು ದಾಖಲು
ಭದ್ರತಾ ದೃಷ್ಟಿಯಿಂದ ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಬೇಕೆಂದು ಸರ್ಕಾರಿ ಪರ ವಕೀಲರು ಮಾಡಿರೋ ಮನವಿ ಅರ್ಜಿ ವಿಚಾರಣೆ ನಡೆಸಲಿದೆ. ಈಗಾಗಲೇ ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಕೆ ಮಾಡಿದ್ದು, ಟ್ರಯಲ್ ಅತೀ ಶೀಘ್ರದಲ್ಲೇ ಪ್ರಾರಂಭ ಆಗ್ತಾ ಇದೆ. ಹೀಗಾಗಿ, ಆರೋಪಿಯನ್ನು ಪದೇ ಪದೇ ಬಳ್ಳಾರಿಯಿಂದ ಕರೆತರಲು ಸಾಧ್ಯವಿಲ್ಲ. ಜೊತೆಗೆ ಆರೋಪಿ ತಾಯಿಗೆ ಕ್ಯಾನ್ಸರ್ ಮಾರಕ ಕಾಯಿಲೆ ಇದ್ದು, ಬಳ್ಳಾರಿಗೆ ಪ್ರಯಣ ಮಾಡಲು ಕಷ್ಟ. ಹೀಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇರಿಸುವಂತೆ ಮನವಿ ಮಾಡಿದೆ. ಇಂದು ವಾದ ಮಂಡನೆ ಮಾಡಲಿರೋ ಸರ್ಕಾರಿ ಪರ ವಕೀಲರು ಯಾವ ಅಂಶವನ್ನು ಮುಂದಿಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
