ಮೈಸೂರು: ಕನ್ನಡ ಚಿತ್ರರಂಗದ ಹಾಸ್ಯ ನಟ ಚಿಕ್ಕಣ್ಣ ಅವರು ಸದ್ದಿಲ್ಲದೆ ಹಸಮಣೆ ಏರಲು ಸಜ್ಜಾಗಿದ್ದಾರೆ. ಈ ಹಿಂದೆ ಚಿಕ್ಕಣ್ಣ ಅವರ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ಸುದ್ದಿಗಳು ಹರಿದಾಡುತ್ತಿದ್ದವು ಇದೀಗ ಆ ಸುದ್ದಿ ನಿಜವಾಗಿದೆ.
ಹೌದು, ಹಾಸ್ಯ ನಟ ಚಿಕ್ಕಣ್ಣ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯ ಜೊತೆ ಚಿಕ್ಕಣ್ಣ ಹಸಮಣೆ ಏರಲಿದ್ದಾರೆ. ಇದನ್ನೂ ಓದಿ: CM ಭೇಟಿಯಾದ ನಟ ರಾಮಚರಣ್
ಮಹದೇವಪುರ ಗ್ರಾಮದ ಪಾವನಾ ಎಂಬ ಯುವತಿಯ ಜೊತೆ ಚಿಕ್ಕಣ್ಣ ಮದುವೆ ನಿಶ್ಚಯವಾಗಿದೆ. ಈಗಾಗಲೇ ಹೂ ಮುಡಿಸುವ ಶಾಸ್ತ್ರವನ್ನು ಎರಡು ಕುಟುಂಬಗಳು ನೇರವೇರಿಸಿರಿವೆ. ನಿಶ್ಚಿತಾರ್ಥ ಮತ್ತು ಮದುವೆ ದಿನಾಂಕ ಮುಂದಿನ ವಾರ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.
