ಬೆಂಗಳೂರು: ಇಂದು ದೇಶದಾದ್ಯಂತ ಗೌರಿ-ಗಣೇಶ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಮಹಾಲಕ್ಷ್ಮಿ ಲೇಔಟ್ ನ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವಂತಹ ಕೆ ಗೋಪಾಲಯ್ಯ ಅವರು ಸುಮಾರು ಏಳು ಸಾವಿರ ಮಣ್ಣಿನ ಗಣಪತಿ ಮೂರ್ತಿಯನ್ನು ಸಾರ್ವಜನಿಕರಿಗೆ ವಿತರಿಸಿದ್ದಾರೆ.
ಹೌದು, ಗಣೇಶ ಚತುರ್ಥಿ ಅಂಗವಾಗಿ ಮನೆ ಮನೆಗೆ ಮಣ್ಣಿನ ಗಣಪ ಕಾರ್ಯಕ್ರಮದಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜನತೆಗೆ ಪರಿಸರ ಪ್ರೇಮಿ 7,000 ಮಣ್ಣಿನ ಗಣಪತಿಯನ್ನು ಕೆ ಗೋಪಾಲಯ್ಯ ಅವರು ವಿತರಿಸಿದರು. ಇದನ್ನೂ ಓದಿ: ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಸಿಎಂಗೆ ಮನವಿ
ಗಣಪತಿ ಮೂರ್ತಿಯನ್ನು ವಿತರಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪರಿಸರ ಪ್ರೇಮಿ ಮಣ್ಣಿನ ಗಣಪತಿಯನ್ನೇ ಎಲ್ಲರೂ ಪೂಜಿಸಿ ಪರಿಸರವನ್ನು ಉಳಿಸಿ ತಮ್ಮ ಮನೆಗಳ ಬಕೆಟ್ ಗಳಲ್ಲಾಗಲಿ ನೀರಿನ ತೊಟ್ಟಿಗಳಲ್ಲಾಗಲಿ ಗಣೇಶನನ್ನು ವಿಸರ್ಜಿಸಿ ಕ್ಷೇತ್ರದ ಒಂದೊಂದು ವಾರ್ಡ್ಗಳಲ್ಲಿ 2 ಗಣೇಶ ವಿಸರ್ಜನೆಯ ಗಾಡಿಗಳನ್ನು ಬಿಡಲಾಗುವುದು ಎಲ್ಲರೂ ಅಲ್ಲಿಯೇ ಬಿಡಿ ಎಂದು ಸಲಹೆ ನೀಡಿದರು.
