ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಆರ್ ಎಸ್ ಎಸ್ ಗೀತೆ ಹಾಡಿದ್ದಕ್ಕೆ ರಾಜ್ಯ ಮಾತ್ರವಲ್ಲದೆ ಇಡೀ ದೇಶದಲ್ಲೇ ಬಾರಿ ಸುದ್ದಿಯಾಗಿತ್ತು.
ಇನ್ನು ಆರ್ಎಸ್ಎಸ್ ಗೀತೆ ಹಾಡಿದ್ದಕ್ಕೆ ನನ್ನಿಂದ ತಪ್ಪಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕ್ಷಮೆ ಕೇಳಿದ್ದಾರೆ.
ನಗರದಲ್ಲಿ ಇಂದು (ಮಂಗಳವಾರ ಆ. 26) ಮಾಧ್ಯಮಘೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಏನು ತಪ್ಪು ಮಾಡಿಲ್ಲ. ಆರ್ಎಸ್ಎಸ್ ಗೀತೆ ಹಾಡು ಹಾಡಿದ್ದಕ್ಕೆ ನೋವಾಗಿದ್ರೆ ನನ್ನ ಕಾಂಗ್ರೆಸ್ ಕಾರ್ಯಕರ್ತರಿಗೆ, ಪಕ್ಷದ ನಾಯಕರಿಗೆ, ಇಂಡಿಯಾ ಕೂಟಾದ ನಾಯಕರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾನು ಯಾರಿಗೂ ಹೆದರಿಲ್ಲ ಮತ್ತು ಹೆದರಿ ಕ್ಷಮೆ ಕೇಳುತ್ತಿಲ್ಲ. ಪಾಸಿಂಗ್ ರೆಫರೆನ್ಸ್ ನಲ್ಲಿ ಅ ಹಾಡು ಹೇಳಿದ್ದೇನೆ. ಪಕ್ಷದ ನನ್ನ ಲಾಯಲ್ಟಿ ಯಾರು ಪ್ರಶ್ನೆ ಮಾಡೋದು ಬೇಡ. ಅದನ್ನ ಪ್ರಶ್ನೆ ಮಾಡಿದ್ರೆ ಅವರು ಮೂರ್ಖರು ಎಂದು ಹೇಳಿದರು. ಇದನ್ನೂ ಓದಿ: ರಾತ್ರೋರಾತ್ರಿ ಸಿಟಿ ರೌಂಡ್ ಹಾಕಿದ ಡಿಸಿಎಂ ಡಿಕೆಶಿ
ನಾನು ಹುಟ್ಟು ಕಾಂಗ್ರೆಸಿಗ ಮತ್ತು ಸಾಯೋದು ಕಾಂಗ್ರೆಸ್ನಲ್ಲೇ. ನನ್ನ ಧರ್ಮ ನಾನು ಬಿಡಲು ತಯಾರು ಇಲ್ಲ. ನಾನು ಈ ಧರ್ಮದಲ್ಲಿ ಹುಟ್ಟಿದ್ದೇನೆ. ಅದೆ ಎಲ್ಲಾ ಧರ್ಮಗಳ ಮೇಲೆ ನಂಬಿಕೆ ಇದೆ ಎಂದು ತಿಳಿಸಿದರು.
