ಬೆಂಗಳೂರು: ಇಂದು ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಸಿಬಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಸುಧೀರ್ಘ ಚರ್ಚೆಯಲ್ಲಿ ಬಿಜೆಪಿಯವರ ಕಾಲೆಳೆದಿದ್ದಾರೆ.
ಬಿಜೆಪಿಯಲ್ಲಿ ಬುದ್ಧಿವಂತರಿಗೆ ಸ್ಥಾನ ಇಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಕಾಲು ಎಳೆದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಇವತ್ತು ಹೊಸ ಬಟ್ಟೆ ಹಾಕಿದ್ದೀರಾ ಎಂದು ಪ್ರಶಂಸಿದ್ದರು. ಇಲ್ಲ ಇದು ಹಳೆಯ ಬಟ್ಟೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಕೇಸರಿ ಧರಿಸಿದ್ದೀರಲ್ಲ, ಅದನ್ನು ಗಮನಿಸಿದೆ ಎಂದು ಆರ್ ಅಶೋಕ್ ಹೇಳಿದಾಗ, ನೀನು ಧರಿಸಿರುವುದು ಕೇಸರಿ. ನನ್ನ ಬಟ್ಟೆ ಕೇಸರಿ ಅಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿಯ ಸುರೇಶ್ ಕುಮಾರ್, ಬಟ್ಟೆ ಮುಖ್ಯ ಅಲ್ಲ. ಅದನ್ನು ಧರಿಸುವವರು ಮುಖ್ಯ ಎಂಬುದು ಅಶೋಕ್ ಅವರಿಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಅಧಿವೇಶನದಲ್ಲಿ RSS ಪ್ರಾರ್ಥನೆ ಹಾಡಿ ಗಮನ ಸೆಳೆದ ಡಿಸಿಎಂ
ಪಾಪ ಸುರೇಶ್ ಕುಮಾರ್ ಬುದ್ಧಿವಂತರು. ಬಿಜೆಪಿಯಲ್ಲಿ ಬುದ್ಧಿವಂತರಿಗೆ ಸೂಕ್ತ ಸ್ಥಾನಮಾನ ಇಲ್ಲ ಎಂದು ಸಿದ್ದರಾಮಯ್ಯ ಕಾಲು ಎಳೆದರು.
