ಶಹಾಪುರ: ಕನ್ನಡ ನಾಡು ಕಂಡ ಧೀಮಂತ ನಾಯಕ ದಿವಂಗತ ದೇವರಾಜ ಅರಸು ರವರು ರೈತಪರ ಜನಪರ ಹಿಂದುಳಿದ ವರ್ಗಗಳ ಧ್ವನಿಯಾಗಿ ಅವರು ಕೈಗೊಂಡ ಮಾನವೀಯ ಸೇವೆಗಳು ನಾಡಿನ ಜನ ಎಂದಿಗೂ ಮರೆಯುವುದಿಲ್ಲ ಎಂದು ಕುರುಬ ಸಮಾಜದ ತಾಲೂಕ ಅಧ್ಯಕ್ಷ ಯಲ್ಲಪ್ಪ ನರಿ ಹೇಳಿದರು.
ನಗರದ ಕನಕ ನಗರಕ್ಕೆ ತೆರಳುವ ಹಾಲಭಾವಿ ರಸ್ತೆಯಲ್ಲಿರುವ ಕನಕದಾಸರ ನಾಮಫಲಕದ ಎದುರು ಡಿ.ದೇವರಾಜ ಅರಸು ಅವರ ಜನ್ಮದಿನದ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಅವರು, ಸಾಮಾಜಿಕ ನ್ಯಾಯದ ಸ್ಪಷ್ಟತೆ, ಹಿಂದುಳಿದ ವರ್ಗಕ್ಕೆ ಮತ್ತು ದಲಿತರಿಗೆ ಕೊಟ್ಟಿರುವ ನೆರವು ಯಾರು ಮರೆಯುವಂತಿಲ್ಲಾ ಎಂದರು. ಇದನ್ನೂ ಓದಿ: ಧೀಮಂತ ನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಡಿಸಿಎಂ
ಈ ಸಂದರ್ಭದಲ್ಲಿ ಅಯ್ಯಣ್ಣ ಇನಮದಾರ, ಮಲ್ಲಿಕಾರ್ಜುನ ಕಂದಕೂರ, ಅಶೋಕ ದಿನ್ನಿ, ಜಗದೀಶ ಸಿಆರ್‌ಪಿ, ಭೀಮರಾಯ ಹುನ್ನೂರ, ಹಣಮಂತ್ರಾಯ ಪೂಜಾರಿ, ಶೇಖಪ್ಪ ವಾರಿ, ಮಲ್ಲಪ್ಪ ಅರಳಳ್ಳಿ, ವಿಶ್ವನಾಥರೆಡ್ಡಿ ದರಿಯಾಪುರ, ಮರ್ಧಾನಿ ಸಲಾದಪುರ, ಶಿವಶರಣ ಭಂಡಾರಿ, ಬಸವರಾಜ ಭೋಸಗಿ, ಹೊನ್ನಪ್ಪ ಸೇರಿದಂತೆ ಇತರರು ಇದ್ದರು.
