ಮಂಡ್ಯ: ರಾಜ್ಯದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಹಳ್ಳಕೊಳ್ಳಗಳು ತುಂಬಿ ಹರಿಯುವುದರ ಜೊತೆಗೆ ಕೆಆರ್ಎಸ್ ಡ್ಯಾಮ್ ವರುಣನ ಆರ್ಭಟಕ್ಕೆ ಒಳಹರಿವು ಹೆಚ್ಚಾಗಿದೆ.
ಹಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದ ಪರಿಣಾಮ ಹೆಚ್ಚು ನೀರು ಬರುತ್ತಿರಲಿಲ್ಲ. ನಿನ್ನೆಯಿಂದ ಮಳೆಯ ಪ್ರಮಾಣ ಹೆಚ್ಚಿರುವ ಹಿನ್ನೆಲೆ 33,052 ಕ್ಯೂಸೆಕ್ ಒಳಹರಿವು ಬರುತ್ತಿದೆ. ಜೂನ್ ಅಂತ್ಯದಲ್ಲಿಯೇ ಕೆಆರ್ಎಸ್ ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಡ್ಯಾಂನಿಂದ 31,550 ಕ್ಯೂಸೆಕ್ ನೀರನ್ನ ನದಿಗೆ ಹರಿಸಲಾಗುತ್ತಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; ಸದನದಲ್ಲಿ ಇಂದು ಗೃಹ ಸಚಿವರ ಉತ್ತರ ಏನಿರಲಿದೆ?
ಆರ್ಎಸ್ ಡ್ಯಾಂನಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ಡ್ಯಾಂ ಮುಂಭಾಗ ಹಾಲ್ನೊರೆಯಂತೆ ಕಾವೇರಿ ನದಿಯ ಸೌಂದರ್ಯ ಕಂಗೊಳಿಸುತ್ತಿದೆ. ಸದ್ಯ 124.80 ಅಡಿಗಳ ಗರಿಷ್ಠ ಮಟ್ಟದ ಕೆಆರ್ಎಸ್ ಡ್ಯಾಂ 124.54 ಅಡಿಗಳಷ್ಟು ಭರ್ತಿಯಾಗಿದ್ರೆ, 49.452 ಟಿಎಂಸಿ ಗರಿಷ್ಠ ಸಾಮರ್ಥ್ಯವಿರುವ ಡ್ಯಾಂನಲ್ಲಿ 49.089 ಟಿಎಂಸಿಯಷ್ಟು ನೀರು ಭರ್ತಿಯಾಗಿದೆ.
