ಶಹಾಪುರ: ತಾಲೂಕಿನ ಮದ್ದರಕಿ ಗ್ರಾಮ ಪಂಚಾಯಿತಿಯಲ್ಲಿ ಸ್ವಾತಂತ್ರ್ಯೋತ್ಸವದ ದಿನದ ಅಂಗವಾಗಿ 34 ಅಂಗವಿಕಲರಿಗೆ ಹೊಲಿಗೆ ಯಂತ್ರವನ್ನು ವಿತರಣೆ ಮಾಡಲಾಯಿತು.
ಗ್ರಾ.ಪಂ ಅಧ್ಯಕ್ಷ ಮಾಪಣ್ಣ ಬಡಿಗೇರ ಮಾತನಾಡಿ, ಅಂಗವಿಕಲರಿಗೆ ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ನೆರವು ನೀಡಲಾಗುತ್ತಿದೆ. ಅವರಿಗೂ ಸಮಾನ ಅವಕಾಶಗಳು ಲಭಿಸಬೇಕು ಎಂಬುವುದು ಸರ್ಕಾರದ ಉದ್ದೇಶವಾಗಿದೆ. ಕೆಳಗೆ ಬಿಳುವ ವ್ಯಕ್ತಿಗಳ ಮೇಲಕ್ಕೆತ್ತುವುದೇ ಮಾನವ ಧರ್ಮ, ಪರಸ್ಪರ ಸಹಾಯದಿಂದ ಬದುಕು ನಡೆಸಬೇಕು. ಸವಾಲು ಎದುರಿಸುವ ವಿಶೇಷ ಶಕ್ತಿ ಹಾಗೂ ಸ್ಥೈರ್ಯವನ್ನು ಅಂಗವಿಕಲರಿಗೆ ದೇವರು ನೀಡಿದ್ದಾನೆ. ಆತ್ಮವಿಶ್ವಾಸದಿಂದ ಇರಿ, ಛಲ ಮತ್ತು ನಂಬಿಕೆ ಇರಬೇಕು ಎಂದರು. ಇದನ್ನೂ ಓದಿ: ಧ್ವಜಾರೋಹಣ ನೆರವೇರಿಸಿದ ಶಾಸಕ ಸತೀಶ್ ರೆಡ್ಡಿ
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಅನಿತಾ ಈಶ್ವರಪ್ಪ ಗುತ್ತೆದಾರ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ದೇವರಾಜ ಗೋನಾಲ್, ಸದಸ್ಯರು, ಗ್ರಾಮಸ್ಥರು ಇದ್ದರು.
