ನಮ್ಮ ಆರೋಗ್ಯ ಸುಧಾರಣೆಯಲ್ಲಿ ಇರಬೇಕಾದರೆ ದೇಹಕ್ಕೆ ಬೇಕಾದ ಪೋಷಕಾಂಶಗಳು ಹಾಗೂ ವಿಟಮಿನ್ ಇರುವಂತಹ ಹಣ್ಣು, ತರಕಾರಿಗಳನ್ನು ಸೇವನೆ ಮಾಡುತ್ತೇವೆ.
ತರಕಾರಿ ಎಂದ ಕೂಡಲೇ ನೆನಪಾಗುವುದು ಚಪ್ಪರದ ಅವರೆಕಾಯಿ. ಚಪ್ಪರದ ಅವರೆಕಾಯಿ ಪ್ರತಿ ಸೀಸನ್ನಲ್ಲೂ ಸಿಗುವಂತ ತರಕಾರಿ ಯಾಗಿದ್ದು, ಈ ತರಕಾರಿ ಸೇವನೆ ಮಾಡುವುದರಿಂದ ದೇಹಕ್ಕೆ ಬೇಕಾಗಿರುವ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಸತು ಮುಂತಾದ ಖನಿಜಗಳಿಂದ ಸಮೃದ್ಧವಾಗಿರುವ ಈ ತರಕಾರಿ ಜೀರ್ಣಕ್ರಿಯೆ ಸುಧಾರಣೆ, ಮಧುಮೇಹ ನಿಯಂತ್ರಣ, ಮತ್ತು ಹೃದಯ ಆರೋಗ್ಯಕ್ಕೆ ಸಹಕಾರಿ.
ಚಪ್ಪರದ ಅವರೆಕಾಯಿಯಿಂದ ಸಾಮಾನ್ಯವಾಗಿ ಪಲ್ಯ ಅಥವಾ ಸಾಂಬಾರ್ ಮಾಡಿ ಸೇವನೆ ಮಾಡುತ್ತಾರೆ. ವಾರದಲ್ಲಿ ಎರಡು ಅಥವಾ ಮೂರು ಸಾರಿ ಇದರ ಪಲ್ಯ ಅಥವಾ ಸಾರನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಬೇಕಾಗಿರುವಂತಹ ಪೋಷಕಾಂಶಗಳನ್ನು ಒದಗಿಸುತ್ತದೆ.
ಮಾನಸಿಕ ಒತ್ತಡ ಕಡಿತ: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಮಾನಸಿಕ ಒತ್ತಡ ಕಡಿಮೆ ಮಾಡಲು ಚಪ್ಪರದ ಅವರೆಕಾಯಿ ಸೇವನೆ ಒಳ್ಳೆಯದು. ಅಮೈನೋ ಆಮ್ಲಗಳ ಅಂಶ ಹಾರ್ಮೋನ್ ಸಮತೋಲನ ಸಾಧನೆ, ರಕ್ತಹೀನತೆ ನಿವಾರಣೆ ಮಾಡುತ್ತದೆ. ಇದನ್ನೂ ಓದಿ: ವೀಳ್ಯದೆಲೆ ಸೇವೆ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ..?
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ: ಚಪ್ಪರದ ಅವರೆಕಾಯಿ ಸೇವನೆ ಮಾಡುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದರ ಜೊತೆಗೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಹೃದಯ ಆರೋಗ್ಯ: ಈ ತರಕಾರಿಯಲ್ಲಿ ವಿಟಮಿನ್ ಬಿ1 ಅಂಶವು ಹೆಚ್ಚಾಗಿರುವುದರಿಂದ ಇದು ಹೃದಯಕ್ಕೆ ಹಾಗೂ ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಉಸಿರಾಟ ಸಮಸ್ಯೆ ತಡೆ: ಉಸಿರಾಟದ ತೊಂದರೆ ಇದ್ದರೆ ಚಪ್ಪರದ ಅವರೆಕಾಯಿಯನ್ನು ಸೇವನೆ ಮಾಡುವುದರಿಂದ ಉಸಿರಾಟದ ತೊಂದರೆಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಎಂದು ವೈದ್ಯರು ತಿಳಿಸುತ್ತಾರೆ.
