ಬೆಂಗಳೂರು: ನವೆಂಬರ್ 18 ರಿಂದ 20 ರವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಶೃಂಗಸಭೆ 2025ರ ಸಿದ್ಧತೆಗಳ ಭಾಗವಾಗಿ ಇಂದು (ಸೋಮವಾರ ಆಗಸ್ಟ್ 11) ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಸಮ್ಮೇಳನಗಳಲ್ಲಿ ಒಂದಾಗಿರುವ ‘ಬೆಂಗಳೂರು ಟೆಕ್ ಶೃಂಗಸಭೆ’ ವತಿಯಿಂದ ಇಂದು ಬೆಂಗಳೂರಿನ ಖಾಸಗಿ ಹೋಟೆಲ್’ನಲ್ಲಿ ಆಯೋಜಿಸಿದ್ದ ಉಪಹಾರ ಸಭೆಯಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೊಂದಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪಾಲ್ಗೊಂಡು, ಕ್ಯಾಟಲಿಸ್ಟ್ (KATALYST) ಪುಸ್ತಕ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಬೆಂಗಳೂರು ತಂತ್ರಜ್ಞಾನದ ತವರೂರು. ಭಾರತದ ಆವಿಷ್ಕಾರ ವಲಯದಲ್ಲಿ ಬೆಂಗಳೂರು ನಂಬರ್ ಒನ್ ಆಗಿರುವುದು ನಮ್ಮ ಹೆಮ್ಮೆ. ತಾಂತ್ರಿಕ ಉತ್ಕೃಷ್ಟತೆ, ನಾವೀನ್ಯತೆ ಮತ್ತು ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಸ್ಟಾರ್ಟ್ ಅಪ್ ಗಳ ಬೆಳವಣಿಗೆ ಮೂಲಕ ಕರ್ನಾಟಕದ ಹಿರಿಮೆ ಹೆಚ್ಚಿಸಲು ನಾವು ಬದ್ಧ ಎಂದರು. ಇದನ್ನೂ ಓದಿ: ಟೆಕ್ ಶೃಂಗಸಭೆ 2025; 100ಕ್ಕೂ ಹೆಚ್ಚು ಕಂಪನಿಗಳ CEO ಗಳ ಜೊತೆ ಸಿಎಂ ಸಭೆ!
