ಬೆಂಗಳೂರು: ಇತ್ತೀಚಿಗಷ್ಟೇ ವಿಧಾನಸೌಧದ ಆವರಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೈಕಲ್ ಸವಾರಿ ಮಾಡಿ ಸಾರ್ವಜನಿಕರ ಗಮನ ಸೆಳೆದಿದ್ದ ಅವರು ಇಂದು (ಮಂಗಳವಾರ ಆ. 05) ರಂದು ಸ್ಕೂಟರ್ ಓಡಿಸುವ ಮೂಲಕ ಮತ್ತಷ್ಟು ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ಹೌದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಹೆಬ್ಬಾಳದ ಮೇಲ್ಸೇತುವೆ ಮೇಲೆ ಸ್ಕೂಟರ್ ರೈಡ್ ಮಾಡಿ ಗಮನ ಸೆಳೆದಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಂಡಿರುವ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಮೇಲ್ಸೇತುವೆ ಕಾಮಗಾರಿಯನ್ನು ಸಚಿವರಾದ ಬೈರತಿ ಸುರೇಶ್ ಅವರು, ಶಾಂತಿನಗರ ಶಾಸಕರು ಹಾಗೂ ಬಿಡಿಎ ಅಧ್ಯಕ್ಷರಾದ ಶ್ರೀ ಎನ್.ಎ.ಹ್ಯಾರಿಸ್ ಅವರು ಮತ್ತು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಬೆಂಗಳೂರು ದಕ್ಷಿಣ ಭಾಗದ ಜನರ ಕನಸು ನನಸು
ಬಳಿಕ ಹೊಸ ಫ್ಲೈಓವರ್ ಮೇಲೆಯೇ ಡಿಕೆಶಿ ಸ್ಕೂಟರ್ ರೈಡ್ ಮಾಡಿ ಖುಷಿ ಪಟ್ಟರು. ಡಿಕೆಶಿಯವರು ಈ ವೇಳೆ ಕಾರ್ಯಕರ್ತರೊಬ್ಬರ ಡಿಯೋ ಸ್ಕೂಟರ್ ಅನ್ನು ತಾವೇ ಓಡಿಸಿಕೊಂಡು ಹೊಸ ಫ್ಲೈಓವರ್ ಮೇಲೆ ಒಂದು ರೌಂಡ್ ಹೋಗಿ ಬಂದು ಎಲ್ಲರ ಗಮನ ಸೆಳೆದಿದ್ದಾರೆ.
