ಶಹಾಪುರ ನಗರದಲ್ಲಿನ ಭಾವಸಾರ ಕ್ಷತ್ರೀಯ ಸಮಾಜದ ಆರಾಧ್ಯ ದೇವತೆ ಹಿಂಗುಲಾಂಭಿಕಾ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ರೂ.50 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಇನ್ನೂ ಸುಮಾರು ರೂ.20ಲಕ್ಷ ಅನುದಾನ ಕಲ್ಪಿಸಿ ಸುಸಜ್ಜಿತಗೊಳಿಸಲಾಗುವುದು ಎಂದು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ವಿದ್ಯಾನಗರದಲ್ಲಿರುವ ಹಿಂಗುಲಾಂಭಿಕಾ ದೇವಸ್ಥಾನದಲ್ಲಿ ನಡೆದ ಸಮುದಾಯ ಭವನ ಕಾಮಗಾರಿಯನ್ನುಇಂದು (ಶುಕ್ರವಾರ ಆ.01) ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಸರಕಾರದಿಂದ ಈ ಬಾರಿ ಮತ್ತೆ ಮಠ, ಮಂದಿರ, ಮಸೀದಿ, ದೇವಸ್ಥಾನಕ್ಕಾಗಿ ಹೆಚ್ಚಿನ ಅನುದಾನ ಕಲ್ಪಿಸಿ ಪುನಶ್ಚೇತನ ಕಾರ್ಯ ನಡೆಸಲಾಗುತ್ತಿದ್ದು, ಮತಕ್ಷೇತ್ರದ ಹಲವಾರು ದೇವಸ್ಥಾನಗಳಿಗೂ ಅನುದಾನ ಕಲ್ಪಿಸಲಾಗುವುದು. ಈವರೆಗೆ ಹಿಂಗುಲಾಂಭಿಕಾ ದೇವಸ್ಥಾನಕ್ಕೆ ಒದಗಿಸಲಾದ ಅನುದಾನವು ಸಮರ್ಪಕ ಕಾರ್ಯಗಳಿಗೆ ವಿನಿಯೋಗವಾಗುತ್ತಿರುವುದನ್ನು ಗಮನಿಸಿ ಇನ್ನಷ್ಟು ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಸಚಿವ ದರ್ಶನಾಪುರ ಭರವಸೆ ನೀಡಿದರು. ಇದನ್ನೂ ಓದಿ: ಬಿಬಿಎಂಪಿ ಎಲೆಕ್ಷನ್ ಗೆ ಮುಹೂರ್ತ ಫಿಕ್ಸ್..!
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ನಾಗೇಂದ್ರ ಬಾಸುತ್ಕರ್,ತುಳಜಾರಾಮ್ ಬಾಸುತ್ಕರ್, ಅಮರ್ ಮಹೇಂದ್ರಕರ್,ಸುರೇಶ ಬಾಸುತ್ಕರ್,ಚಿದಾನಂದ ಬಾಸುತ್ಕರ್,ಸಂತೋಷ ಬಾಸುತ್ಕರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
