ದೆಹಲಿ: ನಮ್ಮ ಮೆಟ್ರೋ ಟಿಕೆಟ್ ಟಿಕೆಟ್ ದರ ಏರಿಕೆ ಮಾಡಿರುವುದರಿಂದ ಬಿಎಂಆರ್ಸಿಎಲ್ ವಿರುದ್ಧ ಈಗಾಗಲೇ ಸಾರ್ವಜನಿಕರು ಸೇರಿದಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಹೋರಾಡುತ್ತಿದ್ದಾರೆ. ಅಲ್ಲದೆ ಮತ್ತೆ ಇದೀಗ ಲೋಕಸಭೆಯ ಶೂನ್ಯ ವೇಳೆಯಲ್ಲಿಇಂದು (ಬುಧವಾರ ಜುಲೈ ೩೧) ರಂದು ನಡೆದ ಅಧಿವೇಶನದಲ್ಲಿ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ಮಾತನಾಡಿದ್ದಾರೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಕ ಎಫ್ಎಫ್ಸಿ ವರದಿಯನ್ನು ತಕ್ಷಣ ಪ್ರಕಟಿಸುವಂತೆ ಬಿಎಂಆರ್ಸಿಎಲ್ಗೆ ಸೂಚನೆ ನೀಡಬೇಕೆಂದು ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದರು.
ಸುಮಾರು 4 ತಿಂಗಳ ಹಿಂದೆ ಬಿಎಂಆರ್ಸಿಎಲ್ ಮೆಟ್ರೋ ದರವನ್ನು ಸುಮಾರು ಶೇ.130ರಷ್ಟು ಹೆಚ್ಚಿಸಿತ್ತು. ಸಾರ್ವಜನಿಕ ಸಾರಿಗೆ ಸೇವೆಗಳು ಸಾಮಾನ್ಯ ಜನರಿಗೆ ಕೈಗೆಟುಕುವಂತಿರಬೇಕು. ಈ ಹೆಚ್ಚಳವು ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಇಳಿಕೆಗೆ ಕಾರಣವಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ದರ ಏರಿಕೆಯ ಆಧಾರವನ್ನು ತಿಳಿದುಕೊಳ್ಳಲು ಜನರು ಅರ್ಹರಾಗಿದ್ದಾರೆ. ಆದರೆ, ಹಲವು ವಿನಂತಿಗಳ ಹೊರತಾಗಿಯೂ, ಬಿಎಂಆರ್ಸಿಎಲ್ (ಎಫ್ಎಫ್ಸಿ) ವರದಿಯನ್ನು ಇನ್ನೂ ಸಾರ್ವಜನಿಕಗೊಳಿಸಿಲ್ಲ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಕೊನೆಗೂ ಅಸ್ತಿ ಪಂಜರಗಳ ಪತ್ತೆ..!
ಬೆಂಗಳೂರು ಮೆಟ್ರೊದಲ್ಲಿ 25 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕೆ ರೂ.90 ಪಾವತಿಸಬೇಕಿದೆ. ಸಾರ್ವಜನಿಕರ ಆಕ್ರೋಶದ ನಂತರ ಬಿಎಂಆರ್ಸಿಎಲ್ ದರವನ್ನು ಅಲ್ಪ ಕಡಿಮೆ ಮಾಡಿದೆ. ಆದರೂ, ಪ್ರಯಾಣಿಕರಿಗೆ ಹೊರೆಯಾಗಿದೆ ಎಂದರು.
