ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ರಮ್ಯಾ ಅವರಿಗೆ ನಟ ದರ್ಶನ್ ಅವರ ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ಸ್ ಮಾಡಿದ್ದಾರೆ. ಇನ್ನು ಕೆಟ್ಟದಾಗಿ ಕಾಮೆಂಟ್ಸ್ ಮಾಡಿರುವುದನ್ನು ನಟಿ ರಮ್ಯಾ ಅವರು ತಮ್ಮ ಸೋಶಿಯಲ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲದೆ ಇದೀಗ ಈ ಕುರಿತು ಗೃಹ ಸಚಿವರಾದ ಜಿ ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ. ನಟಿ ರಮ್ಯಾ ಅವರು ಪೊಲೀಸರಿಗೆ ದೂರು ಕೊಟ್ಟರೆ ಅವರ ವಿರುದ್ಧ ಪೊಲೀಸರು ಕಾನೂನು ರೀತಿ ಕ್ರಮ ಜರುಗಿಸುತ್ತಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಈ ಕುರಿತು ಯಾವುದೇ ಡೈರೆಕ್ಷನ್ ಕೊಡುವುದಿಲ್ಲ ನಟಿ ರಮ್ಯಾ ಅವರು ದೂರು ನೀಡಿದರೆ ಪೊಲೀಸರು ಸೂಕ್ತ ಕಾನೂನು ರೀತಿ ಕ್ರಮ ಜರುಗಿಸುತ್ತಾರೆ ಎಂದರು. ಇದನ್ನೂ ಓದಿ: ನಟಿ ರಮ್ಯಾ ಗೆ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಸಂದೇಶ!
ಹಾಗಾದ್ರೆ ದರ್ಶನ್ ಹಾಗೂ ರಮ್ಯಾ ಅವರ ನಡುವೆ ಇರುವ ಜಟಾಪಟಿ ಯಾವ ಹಂತಕ್ಕೆ ಮುಟ್ಟುತ್ತದೆ ಹಾಗೂ ಅಭಿಮಾನಿಗಳು ಯಾವ ಹಂತಕ್ಕೆ ಮುಟ್ಟಿಸುತ್ತಾರೆ ಎಂಬುದೇ ಕುತೂಹಲದ ಸಂಗತಿಯಾಗಿದೆ.
