ಗುಡಿಬಂಡೆ: ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಸೇವಾ ಸಪ್ತಾಹ ಹಾಗೂ ಕಾರ್ಗಿಲ್ ಯೋಧರ ಸ್ಮರಣಾರ್ಥ ಗುಡಿಬಂಡೆ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಆಶ್ರಯದಲ್ಲಿ ಸೇವಾ ಸಪ್ತಾಹದ ಅಂಗವಾಗಿ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಶಹೀದರಾದ ಭಾರತೀಯ ಯೋಧರ ಸ್ಮರಣಾರ್ಥವಾಗಿ ಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಈ ಶಿಬಿರದಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ತಜ್ಞ ವೈದ್ಯರ ಸಲಹೆ ಪಡೆದು ತಪಾಸಣೆ ಮಾಡಿಸಿಕೊಂಡರು. ಆರೋಗ್ಯ ತಪಾಸಣೆಯ ಜೊತೆಗೆ ಜನರಿಗೆ ಅಗತ್ಯ ವೈದ್ಯಕೀಯ ಮಾರ್ಗದರ್ಶನವೂ ನೀಡಲಾಯಿತು. ಇದನ್ನೂ ಓದಿ: ಅಂದ ಮಕ್ಕಳೊಂದಿಗೆ ಮಲ್ಲಿಕಾರ್ಜುನ ಖರ್ಗೆ ರವರ ಹುಟ್ಟು ಹಬ್ಬ ಆಚರಣೆ
ಸೇವಾ ಮನೋಭಾವದಿಂದ ಈ ಶಿಬಿರವನ್ನು ಯಶಸ್ವಿಯಾಗಿ ನೆರವೇರಿಸಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸಂಘಟಕರು ಹಾಗೂ ವೈದ್ಯ ತಂಡದ ಸೇವೆಗಾಗಿ ಸ್ಥಳೀಯ ಜನತೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಜಿಲ್ಲಾ ಸಂಚಾಲಕರು ಅಮರೇಶ್ ಮಾತನಾಡಿ, ನಮ್ಮ ಗುಡಿಬಂಡೆ ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿ ಬಡ ರೈತರು ಮತ್ತು ರೋಗಿಗಳಿಗೆ ಬೇರೆ ಊರಿಗೆ ಹೋಗಿ ಚಿಕಿತ್ಸೆ ಪಡೆಯುವುದು ಕಷ್ಟಕರವಾಗಿದೆ. ಈ ಕಾರಣದಿಂದ ನಮ್ಮ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದೇವೆ ಎಂದು ತಿಳಿಸಿದರು.
