ಮೈಸೂರು: ಬಿಜೆಪಿ ಸಂಸದರು ಕರ್ನಾಟಕ ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಿಂತು ಮಾತನಾಡಲು ಗಡಗಡ ನಡುಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಜೆಡಿಎಸ್ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಇಂದು (ಶನಿವಾರ ಜುಲೈ 19) ರಂದು ನಡೆದ ಸಾಧನ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ಮುಖಂಡರೂ ಈ ವೇದಿಕೆಯಲ್ಲಿ ಇರಬೇಕಿತ್ತು. ಒಂದೇ ವೇದಿಕೆಗೆ ಬಂದಿದ್ದರೆ ಅವರೇನೂ ಅಭಿವೃದ್ಧಿ ಮಾಡಿದ್ದಾರೆ? ನಾವೇನು ಅಭಿವೃದ್ಧಿ ಮಾಡಿದ್ದೇವೆ ಗೊತ್ತಾಗ್ತಿತ್ತು. ಚರ್ಚೆಗೆ ನಾನು ಬರ್ತಿನಿ, ನೀವೂ ಬನ್ನಿ ಚರ್ಚೆ ಮಾಡೋಣ ಅಂತ ಜೆಡಿಎಸ್ – ಬಿಜೆಪಿಗೆ ಬಹಿರಂಗ ಸವಾಲು ಹಾಕಿದರು.
ಸರ್ಕಾರ ದಿವಾಳಿ ಆಗಿದ್ದರೆ, ಅಭಿವೃದ್ಧಿ ಯೋಜನೆ ಮಾಡುಲು ಆಗುತ್ತಿತ್ತಾ? ಸರ್ಕಾರ ದಿವಾಳಿ ಆಗಿಲ್ಲ ಎಂದರಲ್ಲದೇ ಇದು ಸಿದ್ದರಾಮಯ್ಯನ ಶಕ್ತಿ ಪ್ರದರ್ಶನ ಅಲ್ಲ. ಇದು ಅಭಿವೃದ್ಧಿಯ ಶಕ್ತಿಯನ್ನು ಜನರ ಮುಂದೆ ಇಡುವ ಸಮಾವೇಶ. ಮತ್ಸರ ಇರಬೇಕು. ಆದ್ರೆ ಬಿಜೆಪಿ, ಜೆಡಿಎಸ್ಗೆ ಇರುವಷ್ಟು ಮತ್ಸರ ಇರಬಾರದು. ಬಿಜೆಪಿ, ಜೆಡಿಎಸ್ ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ 58 ಸ್ಥಾನ ಗೆದ್ದಿದ್ದೇವು. ಈಗ ಜೆಡಿಎಸ್ ಗೆದ್ದಿರೋದು ಎಷ್ಟು ದೇವೇಗೌಡರೇ? ಜೆಡಿಎಸ್ ಈಗ ಗೆದ್ದಿರೋದು 18 ಸ್ಥಾನ ಮಾತ್ರ. ಜೆಡಿಎಸ್ ಯಾವುದೇ ಕಾರಣಕ್ಕೂ ಸ್ವಂತ ಬಲದಿಂದ ಅಧಿಕಾರೋದಕ್ಕೆ ಸಾಧ್ಯವಿಲ್ಲ. ಜೆಡಿಎಸ್ ವೀಕ್ ಆಗಿದೆ. ಹೀಗಾಗಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಜೆಡಿಎಸ್, ಬಿಜೆಪಿ ಈ ರಾಜ್ಯದಲ್ಲಿ ಜನರ ಪ್ರೀತಿ ಉಳಿಸಿ ಕೊಂಡಿಲ್ಲ ಎಂದು ತಿವಿದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಸಜ್ಜು!
ಜೆಡಿಎಸ್, ಬಿಜೆಪಿ ಸಂಸದರಿಗೆ ಮೋದಿ ಮುಂದೆ ನಿಂತು ರಾಜ್ಯಕ್ಕೆ ಆದ ಅನ್ಯಾಯ ಕೇಳುವ ಧೈರ್ಯವಿಲ್ಲ. ಮೋದಿ ಮುಂದೆ ಮಾತಾಡಲು ಇವರೆಲ್ಲಾ ನಡುಗುತ್ತಾರೆ. ಬಿಜೆಪಿ, ಜೆಡಿಎಸ್ಗೆ ನಾಚಿಕೆ ಆಗಲ್ವಾ? ನಾವು ಜೆಡಿಎಸ್ – ಬಿಜೆಪಿ ಕಾರ್ಯಕರ್ತರಿಗೂ ಗ್ಯಾರಂಟಿ ಕೊಟ್ಟಿದ್ದೇವೆ. ಗ್ಯಾರಂಟಿ ಟೀಕಿಸಲು ಅವರಿಗೆ ನಾಚಿಕೆ ಆಗಬೇಕು ಎಂದರು.
